ಬಳ್ಳಾರಿ:ಗಣಿ ಜಿಲ್ಲೆಯ ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದ 30 ಕ್ರಸ್ಟ್ ಗೇಟ್ಗಳ ಮೂಲಕ ಇಂದು ಬೆಳಗ್ಗೆ 6 ಗಂಟೆಗೆ ಅಂದಾಜು 1,12,086 ಕ್ಯೂಸೆಕ್ ನೀರನ್ನು ನದಿಗೆ ಬಿಡುಗಡೆ ಮಾಡಲಾಗಿದೆ.
ಸದ್ಯ ತುಂಗಭದ್ರಾ ಜಲಾಶಯದಲ್ಲಿ 1632.01 ಅಡಿಯಷ್ಟು ನೀರು ಸಂಗ್ರಹವಾಗಿದ್ದು, 1633 ಅಡಿಯಷ್ಟು ಸಾಮರ್ಥ್ಯವನ್ನ ಈ ಜಲಾಶಯ ಹೊಂದಿದೆ. ಜಲಾಶಯ ಭರ್ತಿಯಾಗಲು ಕೇವಲ 0.99 ಅಡಿಯಷ್ಟೇ ಬಾಕಿಯಿದೆ.
ಜಲಾಶಯದ 30 ಕ್ರಸ್ಟ್ ಗೇಟ್ ಓಪನ್ 78765 ಕ್ಯೂಸೆಕ್ನಷ್ಟು ನೀರು ಈ ಜಲಾಶಯಕ್ಕೆ ಹರಿದು ಬಂದಿದ್ದು, ಇಂದು ಬೆಳಗ್ಗೆ ಅಂದಾಜು 2.5 ಅಡಿಯಷ್ಟು ನೀರನ್ನು 30 ಕ್ರಸ್ಟ್ ಗೇಟ್ಗಳ ಮೂಲಕ ನದಿಗೆ ಹರಿಬಿಡಲಾಗಿದೆ. ಹೀಗಾಗಿ ನದಿ ಪಾತ್ರದ ಜನರು ಸುರಕ್ಷಿತ ಸ್ಥಳಕ್ಕೆ ತೆರಳಬೇಕು ಎಂದು ಜಲಾಶಯದ ಮಂಡಳಿ ಕೋರಿದೆ.
ಕಳೆದ ವರ್ಷ ಇದೇ ದಿನದಂದು ತುಂಗಭದ್ರಾ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಿತ್ತು. ಒಳಹರಿವು 51197 ಕ್ಯೂಸೆಕ್ ಇತ್ತು. ಹೊರಹರಿವು 50597 ಕ್ಯೂಸೆಕ್ ಇತ್ತು. ಜಲಾಶಯದಲ್ಲಿ 100.855 ಟಿಎಂಸಿ ನೀರು ಸಂಗ್ರಹವಾಗಿತ್ತು.
ಆದರೆ ಈ ಬಾರಿ ಒಳಹರಿವು 78765 ಕ್ಯೂಸೆಕ್ ಇದೆ. ಹೊರ ಹರಿವು 88212 ಕ್ಯೂಸೆಕ್ ಇದೆ. ಸದ್ಯ ತುಂಗಭದ್ರಾ ಜಲಾಶಯದಲ್ಲಿ 97.047 ಟಿಎಂಸಿ ನೀರು ಸಂಗ್ರಹವಾಗಿದೆ.