ಬಳ್ಳಾರಿ :ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆದಿದ್ದ ಜಮೀನು ಪತ್ತೆ ಹಚ್ಚಿ ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳು ಅಲ್ಲಿನ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ.
ಬಳ್ಳಾರಿ ಉಪವಿಭಾಗದ ಅಬಕಾರಿ ಡಿವೈಎಸ್ಪಿ ಬಸಪ್ಪ ಪೂಜಾರ ನೇತೃತ್ವದಲ್ಲಿ ಅಬಕಾರಿ ಇಲಾಖೆ ತಂಡವು ಸಿರಗುಪ್ಪ ತಾಲೂಕಿನ ತೆಕ್ಕಲಕೋಟೆ ಸೀಮೆಯ ಶೇಖಣ್ಣ ಎಂಬುವವರ ಹೊಲದ ಮೇಲೆ ದಾಳಿ ನಡೆಸಿತ್ತು.