ಹೊಸಪೇಟೆ: ಸಾರಿಗೆ ನೌಕರರ ಮುಷ್ಕರದಿಂದಾಗಿ ಕಳೆದ 9 ದಿನಗಳಲ್ಲಿ ಹೊಸಪೇಟೆ ವಿಭಾಗದ ಸಾರಿಗೆ ಸಂಸ್ಥೆಗೆ 3.20 ಕೋಟಿ ರೂ. ನಷ್ಟವಾಗಿದೆ ಎಂದು ವಿಭಾಗ ನಿಯಂತ್ರಣಾಧಿಕಾರಿ ಜಿ.ಶೀನಯ್ಯ ತಿಳಿಸಿದರು.
ಮುಷ್ಕರ: ಹೊಸಪೇಟೆ ಸಾರಿಗೆ ವಿಭಾಗಕ್ಕೆ 3.20 ಕೋಟಿ ರೂ. ನಷ್ಟ - ಹೊಸಪೇಟೆ ವಿಭಾಗಕ್ಕೆ 3.20 ಕೋಟಿ ರೂ. ನಷ್ಟ
ಹೊಸಪೇಟೆ ವಿಭಾಗದ ಸಾರಿಗೆ ಸಂಸ್ಥೆಗೆ ಕಳೆದ 9 ದಿನಗಳಲ್ಲಿ 3.20 ಕೋಟಿ ರೂ. ನಷ್ಟವಾಗಿದೆ ಎಂದು ವಿಭಾಗ ನಿಯಂತ್ರಣಾಧಿಕಾರಿ ಜಿ.ಶೀನಯ್ಯ ಮಾಹಿತಿ ನೀಡಿದ್ದಾರೆ.
ಜಿ.ಶೀನಯ್ಯ
ಏ.15 ರಂದು 118 ವಾಹನಗಳು ಕಾರ್ಯಾಚರಣೆ ಮಾಡಿವೆ. ಈ ವಿಭಾಗದಿಂದ ಶೇ.50 ರಷ್ಟು ವಾಹನಗಳು ಸಂಚಾರ ಮಾಡುತ್ತಿವೆ. ಹೀಗಾಗಿ, ಪ್ರಯಾಣಿಕರಿಗೆ ಯಾವುದೇ ರೀತಿಯ ತೊಂದರೆ ಆಗಿಲ್ಲ ಎಂದು ಹೇಳಿದರು.
ಹೂವಿನ ಹಡಗಲಿಯಲ್ಲಿ ಬಸ್ಗಳ ಕಾರ್ಯಾಚರಣೆ ಕಡಿಮೆಯಾಗುತ್ತಿದೆ. ಒಂದು ದಿನದಲ್ಲಿ 42 ಬಸ್ಗಳು ಸಂಚರಿಸುತ್ತಿವೆ. ಅದನ್ನು ಹೊರತುಪಡಿಸಿದರೆ ಯಾವುದೇ ವಾಹನಗಳ ಸಂಚಾರವಿಲ್ಲ. ಕೆಲಸಕ್ಕೆ ಹಾಜರಾಗುವಂತೆ ನೌಕರರನ್ನು ಮನವೊಲಿಸುವ ಪ್ರಯತ್ನ ಮಾಡಲಾಯಿಗಿದೆ. ಆದರೆ, ಯಾರಿಗೂ ಬೆದರಿಕೆ ಹಾಕಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.