ಕಂಪ್ಲಿ ತಾಲೂಕಿನಲ್ಲಿ 3 ಬಾಲ್ಯ ವಿವಾಹಗಳಿಗೆ ಅಧಿಕಾರಿಗಳಿಂದ ಬಿತ್ತು ಬ್ರೇಕ್ - ಬಳ್ಳಾರಿ ಜಿಲ್ಲೆಯ ಕಂಪ್ಲಿ
ಹೊಸಪೇಟೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅಮರೇಶ ನೇತೃತ್ವದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ತಂಡ ಹಾಗೂ ಪೊಲೀಸ್ ಇಲಾಖೆ ಕಾರ್ಯಾಚರಣೆ ನಡೆಸಿ ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಅರಳಿಹಳ್ಳಿ ತಾಂಡಾದಲ್ಲಿ ನಡೆಯಲಿದ್ದ 3 ಬಾಲಕಿಯರ ಬಾಲ್ಯ ವಿವಾಹವನ್ನು ನಿಲ್ಲಿಸಿದೆ.
![ಕಂಪ್ಲಿ ತಾಲೂಕಿನಲ್ಲಿ 3 ಬಾಲ್ಯ ವಿವಾಹಗಳಿಗೆ ಅಧಿಕಾರಿಗಳಿಂದ ಬಿತ್ತು ಬ್ರೇಕ್ Child Marriage has stopped in Kampli](https://etvbharatimages.akamaized.net/etvbharat/prod-images/768-512-7290631-26-7290631-1590057611889.jpg)
ಬಳ್ಳಾರಿ: ಜಿಲ್ಲೆಯ ಕಂಪ್ಲಿ ತಾಲೂಕಿನ ಅರಳಿಹಳ್ಳಿ ತಾಂಡಾದಲ್ಲಿ ನಡೆಯಲಿದ್ದ 3 ಬಾಲಕಿಯರ ಬಾಲ್ಯ ವಿವಾಹವನ್ನು ಅಧಿಕಾರಿಗಳು ಮಧ್ಯ ಪ್ರವೇಶಿಸಿ ತಡೆದಿದ್ದಾರೆ.
ಹೊಸಪೇಟೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅಮರೇಶ ನೇತೃತ್ವದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ತಂಡ ಹಾಗೂ ಪೊಲೀಸ್ ಇಲಾಖೆ ಕಾರ್ಯಾಚರಣೆ ನಡೆಸಿ ಮದುವೆ ನಿಲ್ಲಿಸಿದೆ. ಮಕ್ಕಳ ಸಹಾಯವಾಣಿಗೆ ಬಂದ ಮಾಹಿತಿ ಅನುಸಾರ ಕಾರ್ಯಪ್ರವೃತ್ತರಾದ ಸಿಡಿಪಿಒ ಅಮರೇಶ, ಈ ಗ್ರಾಮಕ್ಕೆ ಭೇಟಿ ನೀಡಿ ಪೋಷಕರಿಗೆ ಕಾನೂನು ತಿಳಿವಳಿಕೆ ನೋಟಿಸ್ ನೀಡಿ ಅವರಿಂದ ಮುಚ್ಚಳಿಕೆ ಬರೆಸಿಕೊಂಡರು.
ಈ ಸಂದರ್ಭ ಸಿಡಿಪಿಒ ಅಮರೇಶ ಬಾಲ್ಯ ವಿವಾಹದಿಂದಾಗುವ ದುಷ್ಪರಿಣಾಮಗಳ ಬಗ್ಗೆ ಪೋಷಕರಿಗೆ ಮನವರಿಕೆ ಮಾಡಿಕೊಟ್ಟರು.