ಹೊಸಪೇಟೆ (ವಿಜಯನಗರ): ವಿಜಯನಗರ ಜಿಲ್ಲೆಯಲ್ಲಿ ಕೊರೊನಾ ಕಾಟದ ನಡುವೆ ಇದೀಗ ಬ್ಲಾಕ್ ಫಂಗಸ್ ಭೀತಿ ಹೆಚ್ಚಾಗಿದೆ. ಹರಪನಹಳ್ಳಿ ತಾಲೂಕಿನಲ್ಲಿ ಮತ್ತೆ ಮೂರು ಬ್ಲ್ಯಾಕ್ ಫಂಗಸ್ ಪ್ರಕರಣಗಳು ಕಂಡು ಬಂದಿದ್ದು, ಜನರಲ್ಲಿ ಆತಂಕ ಹೆಚ್ಚಿಸಿದೆ.
ವಿಜಯನಗರ ಜಿಲ್ಲೆಯಲ್ಲಿ ಒಟ್ಟು ನಾಲ್ಕು ಬ್ಲ್ಯಾಕ್ ಫಂಗಸ್ ಪ್ರಕರಣಗಳು ಕಂಡು ಬಂದಿವೆ. ಕೆಲ ದಿನಗಳ ಹಿಂದೆ ಹರಪನಹಳ್ಳಿ ತಾಲೂಕಿನ ನಿಲಗುಂದ ಗ್ರಾಮದ ವ್ಯಕ್ತಿಯಲ್ಲಿ ಕಂಡು ಬಂದಿತ್ತು. ನಂತರ ಅರಸನಾಳು ಗ್ರಾಮದಲ್ಲೊಂದು, ಉದ್ಗಟ್ಟಿ ತಾಂಡದಲ್ಲಿ ಒಂದು ಹಾಗೂ ಹರಪನಹಳ್ಳಿ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹಿಳೆಗೂ ಕಾಣಿಸಿಕೊಂಡಿದೆ.