ಬಳ್ಳಾರಿ/ವಿಜಯನಗರ : ಎರಡೂ ಜಿಲ್ಲೆಗಳೂ ಸೇರಿ ಇವತ್ತು ಹೊಸದಾಗಿ 285 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, 6 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ.
ಬಳ್ಳಾರಿ, ವಿಜಯನಗರ ಜಿಲ್ಲೆಯಲ್ಲಿ 285 ಸೋಂಕಿತರು ಪತ್ತೆ.. 850 ಮಂದಿ ಡಿಸ್ಚಾರ್ಜ್
ಗಣಿನಾಡು ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯಲ್ಲಿಂದು 285 ಹೊಸ ಕೊರೊನಾ ಸೋಂಕಿತರು ಪತ್ತೆಯಾಗಿದ್ದರೆ, 850 ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದ್ದಾರೆ. 6 ಜನರು ಕೋವಿಡ್ನಿಂದ ಸಾವನ್ನಪ್ಪಿದ್ದಾರೆ.
bellary
93,944 ಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗಿದ್ದರೇ, ಮೃತರ ಸಂಖ್ಯೆ 1,410 ಕ್ಕೆ ಏರಿಕೆಯಾಗಿದೆ. ಒಟ್ಟು 87,059 ಮಂದಿ ಇದುವರೆಗೆ ಜಿಲ್ಲೆಯಲ್ಲಿ ಗುಣಮುಖರಾಗಿದ್ದಾರೆ. ಇಂದು ಒಂದೇ ದಿನ 850 ಜನರು ಗುಣಮುಖರಾಗಿ ಡಿಸ್ಟಾರ್ಜ್ ಆಗಿದ್ದಾರೆ.
ಉಭಯ ಜಿಲ್ಲೆಗಳಲ್ಲಿ ಒಟ್ಟು 5,475 ಸಕ್ರಿಯ ಪ್ರಕರಣಗಳಿವೆ. ಈ ಪೈಕಿ ಬಳ್ಳಾರಿ- 71, ಸಂಡೂರು- 27, ಸಿರುಗುಪ್ಪ- 18, ಹೊಸಪೇಟೆ-57, ಎಚ್.ಬಿ.ಹಳ್ಳಿ- 25, ಕೂಡ್ಲಿಗಿ - 34, ಹರಪನಹಳ್ಳಿ- 27, ಹಡಗಲಿ- 24, ಮತ್ತು ಹೊರ ರಾಜ್ಯದಿಂದ 0 ಮತ್ತು ಹೊರ ಜಿಲ್ಲೆಯಿಂದ ಬಂದ ಇಬ್ಬರಲ್ಲಿ ಕೊರೊನಾ ಕಾಣಿಸಿಕೊಂಡಿದೆ.