ಕರ್ನಾಟಕ

karnataka

ETV Bharat / state

ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆ: ಕೊನೆಯ ದಿನ 193 ನಾಮಪತ್ರ ಸಲ್ಲಿಕೆ - ballari City Corporation election

ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆಗೆ 244 ನಾಮಪತ್ರಗಳು ಸಲ್ಲಿಕೆಯಾಗಿವೆ. ಏಪ್ರಿಲ್ 8ರಿಂದ 15ರವರೆಗೆ ನಾಮಪತ್ರ ಸಲ್ಲಿಕೆಗೆ ಚುನಾವಣಾ ಆಯೋಗ ಅವಕಾಶ ನೀಡಿತ್ತು.

244-nomination-filed-for-ballari-city-corporation-election
ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆ

By

Published : Apr 16, 2021, 9:55 AM IST

ಬಳ್ಳಾರಿ:ಏಪ್ರಿಲ್ 27ರಂದು ನಡೆಯುವ ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆಗೆ‌ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದ ನಿನ್ನೆ 193 ನಾಮಪತ್ರಗಳು ಸಲ್ಲಿಕೆಯಾಗಿವೆ.

ಮಹಾನಗರ ಪಾಲಿಕೆ ವ್ಯಾಪ್ತಿಯ 39 ವಾರ್ಡ್​ಗಳಿಗೆ 244 ನಾಮಪತ್ರಗಳು ಸಲ್ಲಿಕೆಯಾಗಿವೆ. ಏಪ್ರಿಲ್ 8ರಿಂದ 15ರವರೆಗೆ ನಾಮಪತ್ರ ಸಲ್ಲಿಕೆಗೆ ಚುನಾವಣಾ ಆಯೋಗ ಅವಕಾಶ ಕಲ್ಪಿಸಿತ್ತು.

ಕಾಂಗ್ರೆಸ್‌ 40, ಬಿಜೆಪಿ 47, ಜೆಡಿಎಸ್‌ 07, ಎನ್‌ಸಿಪಿ 09, ಕೆಜೆಪಿ 02, ಸಮಾಜವಾದಿ ಪಕ್ಷ 04, ಶಿವಸೇನೆ 01, ಜನಹಿತ ಪಕ್ಷ 04, ಕರ್ನಾಟಕ ರಾಷ್ಟ್ರ ಸಮಿತಿ 03, ಎಎಪಿ 07, ಎಎಎಪಿ 02, ಕೆಆರ್‌ಎಸ್‌ 01, ಎಐಎಂಎಎಂನ 01 ಸೇರಿದಂತೆ ಅಂದಾಜು 116 ಮಂದಿ ಪಕ್ಷೇತರ ಅಭ್ಯರ್ಥಿಗಳಾಗಿ ಉಮೇದುವಾರಿಕೆ ಸಲ್ಲಿಸಿದ್ದಾರೆ.

ಇಂದು ನಾಮಪತ್ರಗಳ‌ ಪರಿಶೀಲನೆ ಕಾರ್ಯ ನಡೆಯಲಿದೆ. ನಾಳೆ ನಾಮಪತ್ರಗಳ‌ನ್ನು ವಾಪಸ್ ಪಡೆಯಲು ಅವಕಾಶವಿದೆ. ಪಕ್ಷೇತರರಲ್ಲಿ ಬಹುತೇಕರು ಕಾಂಗ್ರೆಸ್, ಬಿಜೆಪಿ ಬಂಡಾಯ ಅಭ್ಯರ್ಥಿಗಳಾಗಿದ್ದಾರೆ. ಉಭಯ ಪಕ್ಷದ ಮುಖಂಡರಿಂದ ಮನವೊಲಿಕೆ ಕಸರತ್ತು ನಡೆಯಲಿದ್ದು, ನಾಳೆ ಕೆಲ ಬಂಡಾಯ ಅಭ್ಯರ್ಥಿಗಳು ಉಮೇದುವಾರಿಕೆ ಹಿಂಪಡೆಯುವ ಸಾಧ್ಯತೆಗಳಿವೆ.

ಇದನ್ನೂ ಓದಿ:ಬೆಂಗಳೂರಿನಲ್ಲಿ ಕೋವಿಡ್ 2ನೇ ಅಲೆ ಮಿಂಚಿನ ಸಂಚಾರ: 10,497 ಸೋಂಕಿತರು ಪತ್ತೆ

ABOUT THE AUTHOR

...view details