ಕರ್ನಾಟಕ

karnataka

ETV Bharat / state

ಬಳ್ಳಾರಿ: ವೇದಾವತಿ ನದಿಯಲ್ಲಿ ಪ್ರಾಣ ಭೀತಿಗೆ ಸಿಲುಕಿದ್ದ 24 ಜನರ ರಕ್ಷಣೆ - Etv Bharat Kannada

ಹೂವು ಕೀಳಲು ಹೋಗಿದ್ದ ಸಂದರ್ಭದಲ್ಲಿ ನದಿಯಲ್ಲಿ ದಿಢೀರ್ ನೀರಿನ ಹರಿವು ಹೆಚ್ಚಾಗಿದ್ದು ಪ್ರಾಣ ಭೀತಿಯಲ್ಲಿದ್ದ 24 ಜನರನ್ನು ರಕ್ಷಣೆ ಮಾಡಲಾಗಿದೆ.

bly_01_Rescue_vis01.mp4
ವೇದಾವತಿ ನದಿಯಲ್ಲಿ ಸಿಲುಕು ಭೀತಿಯಲ್ಲದ್ದ 24 ಜನರ ರಕ್ಷಣೆ

By

Published : Aug 2, 2022, 6:43 PM IST

ಬಳ್ಳಾರಿ: ತೋಟದಲ್ಲಿ ಹೂವು ಕೀಳಲು ಹೋಗಿ ನದಿಯಲ್ಲಿ ಸಿಲುಕಿಕೊಳ್ಳುವ ಭೀತಿಯಲ್ಲಿದ್ದ 24 ಜನರನ್ನು ಪೊಲೀಸರು ಮತ್ತು ತುರ್ತು ಸೇವಾ ಸಿಬ್ಬಂದಿಯ ತಂಡ ರಕ್ಷಿಸಿದೆ. ಈ ಘಟನೆ ತಾಲೂಕಿನ ವೈ.ಕಗ್ಗಲ್ ಗ್ರಾಮದಲ್ಲಿ ನಡೆದಿದೆ. ವೇದಾವತಿ ನದಿಯಲ್ಲಿ ನೀರಿನ ಹರಿವು ಕಡಿಮೆ ಇದ್ದುದಕ್ಕೆ ಕಗ್ಗಲ್ ಗ್ರಾಮದ ಜನರು ನದಿ ದಾಟಿ ಹೂವು ಕೀಳುವುದಕ್ಕೆ ತೋಟಕ್ಕೆ ಹೋಗಿದ್ದಾರೆ. ಈ ಸಂದರ್ಭದಲ್ಲಿ ದಿಢೀರ್‌ ನೀರಿನ ಪ್ರಮಾಣ ಹೆಚ್ಚಾಗಿದೆ. ಇದರಿಂದಾಗಿ ನದಿ ದಾಟಲಾಗದೆ ಜನರು ಜೀವಭಯದಲ್ಲಿದ್ದರು. ವಿಷಯ ತಿಳಿಯುತ್ತಿದ್ದಂತೆ ಪಿ.ಡಿ.ಹಳ್ಳಿ ಪೊಲೀಸರು ಘಟನಾ ಸ್ಥಳಕ್ಕಾಗಮಿಸಿ ಬೋಟ್‌ ಮೂಲಕ ಜನರನ್ನು ರಕ್ಷಿಸಿದರು.

ನದಿಯಲ್ಲಿ ಸಿಲುಕುವ ಭೀತಿಯಲ್ಲಿದ್ದ 24 ಜನರ ರಕ್ಷಣೆ

ABOUT THE AUTHOR

...view details