ಬಳ್ಳಾರಿ: ಹಸಿರು ಕ್ರಾಂತಿ ನಂತರ ದೇಶದಲ್ಲಿ ಕೃಷಿಯು ಕ್ಷೀಣಿಸುತ್ತಿದೆ. ನಮ್ಮ ರೈತರು ವಿದೇಶಗಳ ತಂತ್ರಜ್ಞಾನವನ್ನು ಅಳವಡಿಸಿಕೊಂಡು ತಮ್ಮ ಸ್ವಾತಂತ್ರ್ಯವನ್ನು ಕಳೆದುಕೊಂಡಿದ್ದಾರೆ. ಬುದ್ಧಿವಂತರು ಕೃಷಿ ಕಡೆ ಮುಖ ಮಾಡುತ್ತಿಲ್ಲ ಎಂದು ರಾಜೋತ್ಸವ ಪ್ರಶಸ್ತಿ ಪುರಸ್ಕೃತ ಸಾವಯವ ರೈತ ವಿಶ್ವೇಶ್ವರ ಸಜ್ಜನ್ ಅವರು ಪ್ರಸ್ತುತ ಕೃಷಿಯ ತವಕ ತಲ್ಲಣಗಳ ವಿಷಯ ಕುರಿತು ಮಾತನಾಡಿದರು.
ಬುದ್ಧಿ ಜೀವಿಗಳು ಕೃಷಿ ಕಡೆ ಒಲವು ತೋರಬೇಕು: ವಿಶ್ವೇಶ್ವರ ಸಜ್ಜನ - ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ
ಹಸಿರು ಕ್ರಾಂತಿ ನಂತರ ದೇಶದಲ್ಲಿ ಕೃಷಿಯು ಕ್ಷೀಣಿಸುತ್ತಿದೆ. ನಮ್ಮ ರೈತರು ವಿದೇಶಗಳ ತಂತ್ರಜ್ಞಾನವನ್ನು ಅಳವಡಿಸಿಕೊಂಡು ತಮ್ಮ ಸ್ವಾತಂತ್ರ್ಯವನ್ನು ಕಳೆದುಕೊಂಡಿದ್ದಾರೆ. ಬುದ್ಧಿವಂತರು ಕೃಷಿ ಕಡೆ ಮುಖ ಮಾಡುತ್ತಿಲ್ಲ ಎಂದು ರಾಜೋತ್ಸವ ಪ್ರಶಸ್ತಿ ಪುರಸ್ಕೃತ ಸಾವಯವ ರೈತ ವಿಶ್ವೇಶ್ವರ ಸಜ್ಜನ್ ಅವರು ಪ್ರಸ್ತುತ ಕೃಷಿಯ ತವಕ ತಲ್ಲಣಗಳ ವಿಷಯ ಕುರಿತು ಮಾತನಾಡಿದರು.
![ಬುದ್ಧಿ ಜೀವಿಗಳು ಕೃಷಿ ಕಡೆ ಒಲವು ತೋರಬೇಕು: ವಿಶ್ವೇಶ್ವರ ಸಜ್ಜನ 21st Bellary District Kannada Literary Conference](https://etvbharatimages.akamaized.net/etvbharat/prod-images/768-512-5934852-thumbnail-3x2-bly.jpg)
ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ನಡೆದ 21ನೇ ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾನುವಾರ ಕೃಷಿ ಮತ್ತು ಕೈಗಾರಿಕೆ ಗೋಷ್ಠಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ದೇಶವು ಯಾವುದೇ ಸಂದರ್ಭದಲ್ಲಿ ನಮ್ಮ ಮೂಲವೃತ್ತಿಯನ್ನು ಕೈ ಬಿಡಬಾರದು. ಕೃಷಿಗೆ ಸಂಬಂಧಿತ ಕೈಗಾರಿಕೆಯನ್ನು ಸ್ಥಾಪನೆ ಮಾಡಬೇಕು. ಕೃಷಿಯನ್ನು ಸರ್ವನಾಶ ಮಾಡುವ ಕೈಗಾರಿಕೆಗಳನ್ನು ಸ್ಥಾಪನೆ ಮಾಡಬಾರದು ಎಂದರು.
ಗೋಷ್ಠಿಯಲ್ಲಿ ಜೆ.ಎಂ.ವೀರಸಂಗಯ್ಯ ಅಧ್ಯಕ್ಷತೆ ವಹಿಸಿದ್ದರು. ಬಳ್ಳಾರಿ ವೀರಶೈವ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ರಾಜಶ್ರೀ ಪಾಟೀಲ್, ದರೂರು ಪುರುಷೋತ್ತಮಗೌಡ, ಕೆ.ಚೆನ್ನಪ್ಪ, ಬಿ.ಮಹಾರುದ್ರ ಗೌಡ, ಕೆ.ಎಂ.ಹೇಮಯ್ಯ ಸ್ವಾಮಿ, ವಿ.ಎಸ್.ಶಿವಶಂಕರ ಇದ್ದರು.