ಹೊಸಪೇಟೆ: ಭಾರಿ ಮಳೆ-ಗಾಳಿಗೆ 20 ವಿದ್ಯುತ್ ಕಂಬಗಳು ಧರೆಗುರುಳಿದ ಘಟನೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಹುಲಿಕಟ್ಟಿ ಗ್ರಾಮದಲ್ಲಿ ನಡೆದಿದೆ.
ಹರಪನಹಳ್ಳಿಯಲ್ಲಿ ಮಳೆ-ಗಾಳಿಗೆ ಧರೆಗುರುಳಿದ 20 ವಿದ್ಯುತ್ ಕಂಬಗಳು - ನೆಲಕ್ಕುರುಳಿದ ಕಂಬ
ಭಾರಿ ಮಳೆ-ಗಾಳಿಗೆ 20 ವಿದ್ಯುತ್ ಕಂಬಗಳು ಧರೆಗೆ ಉರುಳಿದ ಘಟನೆ ವಿಜಯನಗರ ಜಿಲ್ಲೆಯಲ್ಲಿ ನಡೆದಿದೆ.

Pole
ಸಂಜೆ ಆಗುತ್ತಿದ್ದಂತೆ ಮಳೆಯೊಂದಿಗೆ ಗಾಳಿ ಜೋರಾಗಿ ಬೀಸಿದೆ. ಹೀಗಾಗಿ ಕಂಬಗಳು ರಸ್ತೆಗೆ ಉರುಳಿವೆ. ಅಲ್ಲದೇ, ಹೊಲದಲ್ಲಿನ ಕಂಬಗಳು ಹಾಗೂ ಮರಗಳು ಸಹ ಉರುಳಿವೆ.
ಇದರಿಂದ ಕೆಲ ಕಾಲ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಯಾಗಿತ್ತು. ಕೂಡಲೇ ಜೆಸ್ಕಾಂ ಅಧಿಕಾರಿ ಕ್ರಮ ಕೈಗೊಳ್ಳಬೇಕು ಎಂದು ಜನ ಆಗ್ರಹಿಸಿದರು.