ಹೊಸಪೇಟೆ:ನೇಕಾರರು ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ. ಆದರೆ, ಅವರು ತಯಾರಿಸುವ ವಸ್ತುಗಳಿಗೆ ಮಾರುಕಟ್ಟೆಯಲ್ಲಿ ಬಹು ಬೇಡಿಕೆಯಿದೆ ಎಂದು ಹಂಪಿ ವಿಶ್ವವಿದ್ಯಾಲಯದ ದೇವರ ದಾಸಿಮಯ್ಯ ಅಧ್ಯಯನ ಪೀಠದ ಸಂಚಾಲಕ ಡಾ.ಗೋವಿಂದ ಹೇಳಿದ್ದಾರೆ.
ಹೊಸಪೇಟೆಯಲ್ಲಿ 2 ದಿನ ನೇಕಾರರ ರಾಜ್ಯ ಮಟ್ಟದ ಸಂಕೀರ್ಣ.. - ಬಳ್ಳಾರಿ ಜಿಲ್ಲೆಯ ಹೊಸಪೇಟೆ
ನೇಕಾರರು ಸಿದ್ದಪಡಿಸುವ ವಸ್ತುಗಳಿಗೆ ಉತ್ತಮವಾದ ಬೆಲೆ ಸಿಗುತ್ತದೆ ಅದಕ್ಕಾಗಿ ನೇಕಾರರು ವೃತ್ತಿ ಧರ್ಮವನ್ನು ಯಾವುದೇ ಕಾರಣಕ್ಕೆ ಮರೆಯಬಾರದು ಎಂದು ಹಂಪಿ ವಿಶ್ವ ವಿದ್ಯಾಲಯದ ದೇವರ ದಾಸಿಮಯ್ಯ ಅಧ್ಯಯನ ಪೀಠದ ಸಂಚಾಲಕ ಡಾ.ಗೋವಿಂದ ಹೇಳಿದ್ದಾರೆ.
ನಗರದ ವಡಕರಾಯ ದೇವಾಲಯದಲ್ಲಿ ಡಿಸೆಂಬರ್ 20-21 ರಂದು ಎರಡು ದಿನದ ನೇಕಾರರ ರಾಜ್ಯ ಮಟ್ಟದ ಸಂಕೀರ್ಣದ ಬಗ್ಗೆ ಮಾತನಾಡಿದ ಅವರು, ನೇಕಾರರು ದೇಶದ ಜನರಿಗೆ ಗೌರವಯುತವಾಗಿ ಜೀವನ ನಡೆಸುವಂತೆ ಮಾಡುತ್ತಾರೆ. ಆದರೆ, ತಂತ್ರಜ್ಞಾನ ಅಭಿವೃದ್ಧಿಯಾದಂತೆ ನೇಕಾರ ಮಾಡುವ ಗುಡಿ ಕೈಗಾರಿಕೆ ಮರೆಯಾಗುತ್ತಿದೆ. ನೇಕಾರರು ತಮ್ಮ ನೇಯ್ಗೆ ಕಾಯಕದಲ್ಲಿ ತೊಡಗಿರುತ್ತಾರೆ ಎಂದರು.
ಡಿಸೆಂಬರ್ 21ರಂದು ಶನಿವಾರ ಸಂಜೆ 4 ಗಂಟೆಗೆ ಡಾ.ಈಶ್ವರಾನಂದ ಸ್ವಾಮಿ ಮುದೇನೂರ, ಡಾ.ಎ.ಸುಬ್ಬಣ್ಣ ರೈ ಕುಲಸಚಿವರು ಹಂಪಿ ವಿವಿ, ಕೆ ಸಿ ಕೊಂಡಯ್ಯ ಕರ್ನಾಟಕ ರಾಜ್ಯ ನೇಕಾರ ಸಂಘ ಒಕ್ಕೂಟ ಬಳ್ಳಾರಿ,ಹಿರಿಯ ಸಾಹಿತಿವಿಠ್ಠಪ್ಪ ಗೋರಂಟ್ಲಿ ಹಾಗೂ ಇತರ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.