ಕರ್ನಾಟಕ

karnataka

ETV Bharat / state

ಹೊಸಪೇಟೆ ಪ್ರಧಾನ ಅಂಚೆ ಕಚೇರಿಗೆ 150 ವರ್ಷಗಳ ಇತಿಹಾಸ: ಕಾಲಕ್ಕೆ ತಕ್ಕಂತೆ ಬದಲಾವಣೆ - ಹೊಸಪೇಟೆ ಇತ್ತೀಚಿನ ಸುದ್ದಿ

ಹೊಸಪೇಟೆ ಪ್ರಧಾನ ಅಂಚೆ ಕಚೇರಿಗೆ 150 ವರ್ಷಗಳ ಇತಿಹಾಸವಿದೆ. 1870-75ರ ಒಳಗಡೆ ಪ್ರಾರಂಭವಾಗಿರಬೇಕು ಎಂಬುದು ಸಂಶೋಧಕರ ಮಾತಾಗಿದೆ. ಪ್ರಾರಂಭದ ಹಂತದಲ್ಲಿ ಸರ್ಕಾರಿ ಕಚೇರಿಗಳಲ್ಲಿಯೇ ಅಂಚೆ ಕಚೇರಿ ಇತ್ತು. ಈಗ ಪ್ರತ್ಯೇಕವಾಗಿ ಕಾರ್ಯನಿರ್ವಹಿಸುತ್ತಿದೆ.‌ ಕಾಲಮಾನಕ್ಕೆ ತಕ್ಕಂತೆ ಹೊಸ ಸ್ವರೂಪದೊಂದಿಗೆ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಸಾರ್ವಜನಿಕರ ಮುಂದೆ ಬರುತ್ತಿದೆ.

ಹೊಸಪೇಟೆ ಅಂಚೆ ಇಲಾಖೆ
ಹೊಸಪೇಟೆ ಅಂಚೆ ಇಲಾಖೆ

By

Published : Oct 13, 2020, 11:57 AM IST

ಹೊಸಪೇಟೆ:ಅಂಚೆ ವ್ಯವಸ್ಥೆ ಮೊಟ್ಟ ಮೊದಲ ಬಾರಿಗೆ ಮೈಸೂರು ಸಂಸ್ಥಾನದಲ್ಲಿ 18 ಶತಮಾನದಲ್ಲಿ ಪ್ರಾರಂಭವಾಯಿತು. ಆಡಳಿತ ವ್ಯವಹಾರಕ್ಕಾಗಿ ಅಂಚೆ ಇಲಾಖೆಯನ್ನು ಮೊದಲು ಬಳಸಿಕೊಳ್ಳಲಾಗಿದೆ. ಆ ಬಳಿಕ ಸಾರ್ವಜನಿಕ ಸೇವೆಗೆ ಇಲಾಖೆ ತನ್ನನ್ನು ತೆರೆದುಕೊಂಡಿತು. ಈ ನಿಟ್ಟಿನಲ್ಲಿ ಹೊಸಪೇಟೆ ಅಂಚೆ ಇಲಾಖೆಗೆ 150 ವರ್ಷಗಳ ಇತಿಹಾಸವಿದೆ. ಇದು 1870-75 ರ ಒಳಗಡೆ ಪ್ರಾರಂಭವಾಗಿರಬೇಕು ಎಂಬುದು ಸಂಶೋಧಕರ ಮಾತು.

ಹಿಂದಿನ ಕಾಲದಲ್ಲಿ ಅಂಚೆ ಇಲಾಖೆಯು ಬೇಹುಗಾರಿಕೆಯ ಒಂದು ಭಾಗವಾಗಿ ಕಾರ್ಯ‌ನಿರ್ವಹಿಸುತ್ತಿತ್ತು. ಸರಕಾರದ ಪತ್ರಗಳನ್ನು ಸರಬರಾಜು ಮಾಡಲು ಈ ಇಲಾಖೆಯನ್ನು ಉಪಯೋಗಿಸಲಾಗುತ್ತಿತ್ತು. 19ನೇ ಶತಮಾನದಲ್ಲಿ ಬಳ್ಳಾರಿಯು ಮದ್ರಾಸ್ ಪ್ರಾಂತ್ಯಕ್ಕೆ ಸೇರ್ಪಡೆಗೊಳ್ಳುತ್ತೆ.‌ ಆ ಸಂದರ್ಭದಲ್ಲಿ ಇಲಾಖೆಯು ಕಾರ್ಯಾರಂಭ ಮಾಡಿದೆ. 1871 ರಂದು ಬಳ್ಳಾರಿಯಲ್ಲಿ ಅಂಚೆ ಕೇಂದ್ರವನ್ನು ತೆರೆಯಲಾಯಿತು. ಪ್ರಾರಂಭದ ಹಂತದಲ್ಲಿ ಸರಕಾರಿ ಕಚೇರಿಗಳಲ್ಲಿದ್ದ ಅಂಚೆ ಇಲಾಖೆ ಈಗ ಪ್ರತ್ಯೇಕವಾಗಿ ಕಾರ್ಯನಿರ್ವಹಿಸುತ್ತಿದೆ.‌ ಕಾಲ ಮಾನಕ್ಕೆ ತಕ್ಕಂತೆ ಹೊಸ ಸ್ವರೂಪದೊಂದಿಗೆ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಸಾರ್ವಜನಿಕರ ಮುಂದೆ ಬರುತ್ತಿದೆ.

ಹೊಸಪೇಟೆ ಅಂಚೆ ಇಲಾಖೆಯ ಸ್ವರೂಪ ಬದಲಾವಣೆ

ಪುಣ್ಯಮೂರ್ತಿ ವೃತ್ತದ ಕಾಲೇಜು ಬಳಿ ನಗರಸಭೆಯ ಹಳೆಯ ಕಟ್ಟಡವಿತ್ತು. ಅದರಲ್ಲಿ ಅಂಚೆ ಇಲಾಖೆಯು ಒಂದು ಭಾಗವಾಗಿ ಕಾರ್ಯನಿರ್ವಹಿಸುತ್ತಿತ್ತು. ಆದರೆ, ಈಗ ಮೇನ್ ಬಜಾರ್​ದಲ್ಲಿ ಬಳಿ ಅಂಚೆ ಇಲಾಖೆಯ ಪ್ರತ್ಯೇಕ ಪ್ರಧಾನ ಕಚೇರಿಯನ್ನು ಕಾಣಬಹುದು. ವರ್ಷದಿಂದ ವರ್ಷಕ್ಕೆ ತನ್ನ ವ್ಯಾಪ್ತಿಯನ್ನು ವಿಸ್ತಾರ ಮಾಡಿಕೊಂಡು ಹೋಗುತ್ತಿದೆ. ನಗರದಲ್ಲಿ ಜೆ.ಪಿ.ನಗರ, ಚಿತ್ತವಾಡ್ಗಿ, ರಾಣಿಪೇಟೆ, ಕೋರ್ಟ್, ಪಟೇಲನಗರ, ಟಿ.ಬಿ.ಡ್ಯಾಂ ಪ್ರದೇಶಗಳಲ್ಲಿ ಅಂಚೆ ಕಚೇರಿಯನ್ನು ತೆರೆಯಲಾಗಿದೆ.‌ ಇವುಗಳಿಗೆ ಪ್ರಧಾನ ಕಚೇರಿ ಮೇನ್ ಬಜಾರ್​ನಲ್ಲಿದೆ.

ಹೊಸಪೇಟೆಯಲ್ಲಿ 17 ಪೋಸ್ಟ್​ಮ್ಯಾನ್​ಗಳು ಮನೆ ಮನೆಗೆ ತೆರಳಿ ಪತ್ರಗಳನ್ನು ತಲುಪಿಸುತ್ತಿದ್ದಾರೆ. ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ, ಕಂಪ್ಲಿ, ಹರಪನಹಳ್ಳಿ, ಹೂವಿನಹಡಗಲಿ, ಕೊಟ್ಟೂರು ತಾಲೂಕುಗಳ ಅಂಚೆ ಕಚೇರಿಗಳಿಗೆ ಹೊಸಪೇಟೆ ಪ್ರಧಾನ ಕಚೇರಿವಾಗಿದೆ. ನಗರದಲ್ಲಿ ಪೋಸ್ಟ್ ಮ್ಯಾನ್​ಗಳಿಗೆ ಸ್ಮಾರ್ಟ್ ಫೋನ್​ಗಳನ್ನು‌‌‌ ನೀಡಲಾಗಿದೆ‌.‌ ಅದರಲ್ಲಿ ಪ್ರತಿನಿತ್ಯ ಕಾರ್ಯ ನಿರ್ವಹಿಸಬಹುದಾಗಿದೆ. ಬುಕ್ಕಿಂಗ್ ವಿಳಾಸದವರಿಗೆ ಹಾಗೂ ಬುಕ್ಕಿಂಗ್ ಮಾಡಿದವರಿಗೆ ಮೊಬೈಲ್ ಮೂಲಕ ಸಂದೇಶ ಹೋಗುತ್ತದೆ. ಅಷ್ಟೊಂದು ತ್ವರಿತಗತಿಯಲ್ಲಿ ಅಂಚೆ ಇಲಾಖೆ ಕಾರ್ಯನಿರ್ವಹಿಸುತ್ತಿದೆ.

2012ರಲ್ಲಿ ಗ್ರಾಮೀಣ ಭಾಗದಲ್ಲಿ ಮ್ಯಾನುವಲ್​ನಿಂದ ಕಾರ್ಯನಿರ್ವಹಿಸಲಾಗುತ್ತಿತ್ತು. ಬಳಿಕ ರೂರಲ್ ಇನ್ಪೋಟೆಕ್ಚರ್ ಡೆವಲಪ್‌ಮೆಂಟ್ ಟೆಕ್ನಾಲಜಿ ಪ್ರಸ್ತುತಪಡಿಸಲಾಯಿತು. ನಂತರ ಪೋಸ್ಟ್‌ಮ್ಯಾನ್​ಗಳಿಗೆ ಸ್ಮಾರ್ಟ್ ಮಿಷನ್​ಗಳನ್ನು ನೀಡಲಾಯಿತು. ಪೆನ್ನು ಹಾಗೂ ಪೇಪರ್​​ಗಳನ್ನು ಬಳಕೆ ಮಾಡುವುದು ಈಗ ಕಡಿಮೆಯಾಗಿದೆ. ತ್ವರಿತಗತಿಯಲ್ಲಿ ಸೇವೆಯನ್ನು ಜನರಿಗೆ ಲಭ್ಯವಾಗುವಂತಾಯಿತು.‌ ಒಂದು ತಿಂಗಳಿನಿಂದ ಹೊಸ ಸೇವೆಯನ್ನು ಜನರಿಗೆ ನೀಡಲಾಗುತ್ತಿದೆ. ಕಾಮನ್ ಸರ್ವಿಸ್ ಸೆಂಟರ್ ಎಂದು ಈ ಸೇವೆಯನ್ನು ಕರೆಯಲಾಗುತ್ತದೆ. ವಿದ್ಯುತ್, ಮೊಬೈಲ್, ಡಿಟಿಎಚ್, ಲ್ಯಾಂಡ್ ಲೈನ್ ಬಿಲ್ ಪಾವತಿಸಬಹುದಾಗಿದೆ. ಈ ಮುಂಚೆ ಅಕೌಂಟ್ ತೆರೆಯಲು ಅವಕಾಶವನ್ನು ನೀಡಲಾಗಿತ್ತು. ಈಗ ಬಿಲ್ ಪಾವತಿಸಲು ಅವಕಾಶವನ್ನು‌ ನೀಡಲಾಗಿದೆ.‌

ಅಂಚೆ ಪ್ರಧಾನ ಕಚೇರಿಯ ಪೋಸ್ಟ್ ಮಾಸ್ಟರ್ ರಮೇಶ ಅವರು‌ ಮಾತನಾಡಿ, 'ಅಂಚೆ ಕಾಲಮಾನಕ್ಕೆ ತಕ್ಕಂತೆ ಬದಲಾವಣೆಗೊಳ್ಳುತ್ತಿದೆ. ಅಲ್ಲದೇ, ತ್ವರಿತಗತಿಯಲ್ಲಿ ಸೇವೆಯನ್ನು ನೀಡುತ್ತಿದೆ. ಬ್ಯಾಂಕಿನ ರೀತಿಯಲ್ಲಿ ಖಾತೆಗಳನ್ನು ತೆರೆಯಬಹುದಾಗಿದೆ' ಎಂದರು.

ಅಂಚೆ ಸಲಹಾ ಸಮಿತಿಯ ಅಧ್ಯಕ್ಷ ವಿಶ್ವನಾಥ ಹಿರೇಮಠ ಪ್ರತಿಕ್ರಿಯಿಸಿ, 'ಅಂಚೆ ಇಲಾಖೆಯಲ್ಲಿ ಎಟಿಎಂಗಳನ್ನು ನೀಡಲಾಗುತ್ತಿದೆ.‌ ಇಲಾಖೆಯು ಆರ್ಥಿಕ ಚಟುವಟಿಕೆಯ ಭಾಗವಾಗಿದೆ. ಅಲ್ಲದೇ, ತಂತ್ರಜ್ಞಾನವನ್ನು ಉತ್ತಮ ರೀತಿಯಾಗಿ ಬಳಕೆ ಮಾಡುತ್ತಿದೆ' ಎಂದು ಹೇಳಿದರು.

ABOUT THE AUTHOR

...view details