ಬಳ್ಳಾರಿ: ಕೊರೊನಾ ಸೋಂಕು ಹೊಸ ಸ್ವರೂಪ ಪಡೆದುಕೊಂಡಿದ್ದು, ಈ ಭೀತಿಯಿಂದ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಮುಂದಾಗಿದೆ.
ಡಿಸೆಂಬರ್ 15 ರಿಂದ 22ರವರೆಗೆ ಬ್ರಿಟನ್ ದೇಶದಿಂದ ಜಿಲ್ಲೆಗೆ ಬಂದಿರುವ 15 ಮಂದಿಯನ್ನು ಕೋಂ ಕ್ವಾರಂಟೈನ್ ಮಾಡಲಾಗಿದೆ. ಅಷ್ಟೇ ಅಲ್ಲದೆ, ಎಲ್ಲರ ಗಂಟಲು ದ್ರವ ಮಾದರಿಯನ್ನು ಕೊರೊನಾ ಪರೀಕ್ಷೆಗೆಂದು ಆರೋಗ್ಯಾಧಿಕಾರಿಗಳು ಸಂಗ್ರಹಿಸಿ ಕೊಂಡೊಯ್ದಿದ್ದಾರೆ.
ಇದನ್ನು ಓದಿ: ಕೊರೊನಾ ರೂಪಾಂತರ ಭೀತಿ : ಶಾಲೆ ಆರಂಭದ ಬಗ್ಗೆ ಸಚಿವರ ಸಭೆ
ಬಳ್ಳಾರಿಯ 6ಜನ, ಹೊಸಪೇಟೆಯ 4ಮಂದಿ, ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿ, ಸಂಡೂರಿನ ತಲಾ ಒಬ್ಬರು ಸೇರಿದಂತೆ ಜಿಲ್ಲೆಗೆ ಒಟ್ಟು 15 ಜನರು ಬ್ರಿಟನ್ನಿಂದ ಆಗಮಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚಿಂತಿಸಲು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ನೇತೃತ್ವದಲ್ಲಿ ಇಂದು ಮಧ್ಯಾಹ್ನ ವಿಡಿಯೋ ಕಾನ್ಫರೆನ್ಸ್ ಮೂಲಕ ಮೀಟಿಂಗ್ ನಡೆಯಲಿದೆ.