ಬಳ್ಳಾರಿ: ಗಣಿ ಜಿಲ್ಲೆಯಲ್ಲಿಂದು ಹೊಸದಾಗಿ 133 ಕೊರೊನಾ ಪಾಸಿಟಿವ್ ಕೇಸ್ಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 2,200ಕ್ಕೆ ಏರಿಕೆಯಾಗಿದೆ.
ಬಳ್ಳಾರಿಯಲ್ಲಿ ಇಂದು 133 ಕೊರೊನಾ ಕೇಸ್ ಪತ್ತೆ: 2,200ಕ್ಕೆ ಏರಿದ ಸೋಂಕಿತರ ಸಂಖ್ಯೆ - ಬಳ್ಳಾರಿ ಕೊರೊನಾ ಪ್ರಕರಣಗಳು
ಬಳ್ಳಾರಿಯಲ್ಲಿ ಇಂದು 133 ಕೊರೊನಾ ಪಾಸಿಟಿವ್ ಕೇಸ್ಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 2,200ಕ್ಕೆ ಏರಿಕೆಯಾಗಿದೆ.

Bellary
ಜಿಲ್ಲೆಯಲ್ಲಿ ಇಂದು ಒಂದೇ ದಿನ 133 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಹೀಗಾಗಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2,200ಕ್ಕೇರಿಕೆಯಾಗಿದ್ದು, 1,207 ಮಂದಿ ಗುಣಮುಖರಾಗಿದ್ದಾರೆ. 54 ಮಂದಿ ಸಾವನ್ನಪ್ಪಿದ್ದಾರೆ. 939 ಸಕ್ರಿಯ ಪ್ರಕರಣಗಳಿವೆ.
ಇಂದು 41 ಮಂದಿ ಗುಣಮುಖರಾಗಿ ಜಿಲ್ಲಾ ಕೋವಿಡ್-19 ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.