ಕರ್ನಾಟಕ

karnataka

ETV Bharat / state

ಹೊಸಪೇಟೆ: ಸೇಫ್​ ಲಾಕರ್ ನಕಲಿ ಕೀ ಬಳಸಿ 13 ಲಕ್ಷ ನಗದು ದೋಚಿದ್ದ ಕಳ್ಳರ ಬಂಧನ - Theft using Safe Locker Duplicate Key in Hospet

ನವೆಂಬರ್ 14ರಂದು ಹೊಸಪೇಟೆಯ ಗಾಂಧಿ ಕಾಲೋನಿಯ ಪುಲರ್ ಟನ್ ಇಂಡಿಯಾ ಕ್ರೆಡಿಟ್ ಕಂಪನಿ ಲಿಮಿಟೆಡ್ ಕಚೇರಿಯ ಸೇಫ್​ ಲಾಕರ್ ನಕಲಿ ಕೀ ಬಳಸಿ 13,66,430 ರೂ. ಹಣ ದೋಚಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

13 lakh stolen using Safe Locker duplicate key in Hospet
ಸೇಫ್​ ಲಾಕರ್ ನಕಲಿ ಕೀ ಬಳಸಿ 13 ಲಕ್ಷ ದೋಚಿದವರ ಬಂಧನ

By

Published : Nov 27, 2020, 7:26 PM IST

ಹೊಸಪೇಟೆ: ತಾಲೂಕಿನಲ್ಲಿ ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ ₹13,03,430 ವಶಪಡಿಸಿಕೊಂಡಿದ್ದಾರೆ.

ಬೀದರ್​ನ ರಾಜಗಿರಿ ಗ್ರಾಮದ ವಿಠ್ಠಲ ಚಿಟ್ಟಿ ಹಾಗೂ ಹಗರಿಬೊಮ್ಮನಹಳ್ಳಿಯ ಯು.ರವಿಕುಮಾರ ಬಂಧಿತರು. ಬಡಾವಣೆ ಕಾರ್ಯಾಚರಣೆ ನಡೆಸಿ ಹೊಸಪೇಟೆಯ ಡ್ಯಾಂ ರಸ್ತೆಯ ಸಾಯಿ ಬಾಬಾ ದೇವಸ್ಥಾನದ ವೃತ್ತದಲ್ಲಿ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಮಾಧ್ಯಮ ಪ್ರಕಟಣೆ

ನವೆಂಬರ್ 14ರಂದು ಹೊಸಪೇಟೆಯ ಗಾಂಧಿ ಕಾಲೋನಿಯ ಪುಲರ್ ಟನ್ ಇಂಡಿಯಾ ಕ್ರೆಡಿಟ್ ಕಂಪನಿ ಲಿಮಿಟೆಡ್ ಕಚೇರಿಯ ಸೇಫ್​ ಲಾಕರ್ ನಕಲಿ ಕೀ ಬಳಸಿ 13,66,430 ರೂ. ಹಣ ದೋಚಲಾಗಿತ್ತು. ಈ ಕುರಿತು ನಗರದ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹೀಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು.‌

ಟಿಬಿ ಡ್ಯಾಂ ಸಿಪಿಸಿ ನಾರಾಯಣ, ಬಡಾವಣೆ ಠಾಣೆಯ ಪಿಎಸ್ಐ ಜಡಿಯಪ್ಪ, ಸಿಬ್ಬಂದಿ ಸಾಬಯ್ಯ, ಜೆ.ಕೊಟ್ರೇಶ್, ತಿಮ್ಮಪ್ಪ, ಈಶ್ವರ, ಪ್ರವೀಣ ಕುಮಾರ ಅವರ ಕಾರ್ಯಕ್ಕೆ ಎಸ್ಪಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details