ಕರ್ನಾಟಕ

karnataka

ETV Bharat / state

12ಬಿ ಮಾನ್ಯತೆ ಪಡೆದ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ.. - ಬಳ್ಳಾರಿ ಜಿಲ್ಲಾ ಸುದ್ದಿ

ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯಕ್ಕೆ ಕೇಂದ್ರದ ಯುನಿವರ್ಸಿಟಿ ಗ್ರ್ಯಾಂಟ್ ಕಮಿಷನ್ ವತಿಯಿಂದ 12 ಬಿ ಮಾನ್ಯತೆ ದೊರೆತಿದ್ದು, ಇನ್ಮೇಲೆ ವಿಶ್ವವಿದ್ಯಾಲಯದ ಘನತೆ, ಗೌರವ ಹೆಚ್ಚಲಿದೆ.

ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ

By

Published : Sep 8, 2019, 10:17 AM IST

ಬಳ್ಳಾರಿ :ನಗರ ಹೊರವಲಯದ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯವು ಒಂದಲ್ಲೊಂದು ವಿವಾದದ ಸುಳಿಗೆ ಸಿಲುಕಿಕೊಂಡೇ ಮುಜುಗರಕ್ಕೀಡಾದ ಬೆನ್ನಲ್ಲೇ ಇದೀಗ ಕೇಂದ್ರದ ಯುನಿವರ್ಸಿಟಿ ಗ್ರ್ಯಾಂಟ್ ಕಮಿಷನ್ ವತಿಯಿಂದ 12 ಬಿ ಮಾನ್ಯತೆ ದೊರೆತಿದ್ದು, ಇನ್ಮೇಲೆ ವಿಶ್ವವಿದ್ಯಾಲಯದ ಘನತೆ, ಗೌರವ ಹೆಚ್ಚಲಿದೆ.

ಕೇಂದ್ರ ಸರ್ಕಾರ ಯುನಿವರ್ಸಿಟಿ ಗ್ರ್ಯಾಂಟ್ ಕಮಿಷನ್ ವತಿಯಿಂದ 12ಬಿ ಮಾನ್ಯತೆಯ ಪರವಾನಗಿ ಪತ್ರವನ್ನು ವಿಎಸ್‌ಕೆ ವಿಶ್ವವಿದ್ಯಾಲಯ ಕುಲಪತಿಯವರಿಗೆ ರವಾನಿಸಿದೆ. ಇದರಿಂದಾಗಿ ವಿಶ್ವವಿದ್ಯಾಲಯದ ಬಹುದಿನದ ಕನಸು ನೆರವೇರಿದಂತಾಗಿದೆ. 12ಬಿ ಮಾನ್ಯತೆಯ ಪರವಾನಗಿ ದೊರೆತಿರೋದು ನಮಗೆ ಹೆಮ್ಮೆಯ ವಿಷಯವಾಗಿದೆ. ಈ ಹಿಂದಿನ ಕುಲಪತಿಗಳು, ಮೌಲ್ಯಮಾಪನ ಕುಲಸಚಿವರ ಶತಾಯಗತಾಯ ಪ್ರಯತ್ನದಿಂದಾಗಿ ಈ ಮಾನ್ಯತೆ ಪರವಾನಗಿ ದೊರೆತಿರೋದು ಖುಷಿ ತಂದಿದೆ ಎಂದು ಕುಲಪತಿ ಪ್ರೊ.ಸಿದ್ದು ಪಿ.ಅಲಗೂರು ಈಟಿವಿ ಭಾರತ್‌ಗೆ ತಿಳಿಸಿದ್ದಾರೆ.

12 ಬಿ ಮಾನ್ಯತೆ ಪಡೆದ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಗತ್ಯ ಅನುದಾನವನ್ನು ಈ ವಿಶ್ವವಿದ್ಯಾಲಯಕ್ಕೆ ಬಿಡುಗಡೆ ಮಾಡಲಿವೆ. ಯುಜಿಸಿ ನಿಯಮಾನುಸಾರ ಪ್ರಾಧ್ಯಾಪಕರ ಹಾಗೂ ಉಪನ್ಯಾಸಕರ ನೇಮಕ ನಡೆಯಲಿದೆ. ಈ ಮಾನ್ಯತೆಯ ಪರವಾನಗಿಯಿಂದ ನ್ಯಾಕ್ ಕಮಿಟಿಗೂ ಪೂರಕ ಆಗಲಿದೆ. ಹೈದರಾಬಾದ ಕರ್ನಾಟಕ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಶ್ರೇಯೋಭಿವೃದ್ಧಿಗೂ ಸಹಕಾರಿಯಾಗಲಿದೆ. ಅಲ್ಲದೇ, ಸಂಶೋಧನಾ ಕೇಂದ್ರಗಳ ಆರಂಭಕ್ಕೂ ಅಗತ್ಯ ಅನುದಾನ ಮೀಸಲಿರಿಸಲು ಅನುಕೂಲಕರ ಆಗಲಿದೆ ಎಂದು ತಿಳಿಸಿದರು.

ನ್ಯಾಕ್‌, 12 ಬಿ ಮಾನ್ಯತೆಗೆ ಕಸರತ್ತು :

2010ನೇ ಇಸವಿಯಲ್ಲೇ ಬಳ್ಳಾರಿ, ಕೊಪ್ಪಳ ಜಿಲ್ಲೆಗಳನ್ನೊಳಗೊಂಡಂತೆ ಶುರುವಾಗಿರುವ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯವು ಇನ್ನೂ ಅಂಬೆಗಾಲಿಡುತ್ತಿದೆ. ಈಗಾಗಲೇ 2 ಎಫ್‌ ಮಾನ್ಯತೆ ಪಡೆದಿದ್ದು, ಯುಜಿಸಿಯಿಂದ ಅನುದಾನ ಪಡೆಯುವ ನಿಟ್ಟಿನಲ್ಲಿ ತನ್ನ ಕಸರತ್ತು ನಡೆಸುತ್ತಾ, ನ್ಯಾಕ್‌ ಮತ್ತು 12ಬಿ ಮಾನ್ಯತೆ ಪಡೆಯುವ ಗುರಿ ಇಟ್ಟುಕೊಂಡು ನಾನಾ ಕಸರತ್ತುಗಳನ್ನು ನಡೆಸಿ ಇದೀಗ ಯಶಸ್ಸು ಕಂಡಿದೆ.

ABOUT THE AUTHOR

...view details