ಕರ್ನಾಟಕ

karnataka

ETV Bharat / state

ಗಣಿ ಜಿಲ್ಲೆಯಲ್ಲಿ 1204 ಜನ ಹೋಂ ಕ್ವಾರಂಟೈನ್​... ಕಟ್ಟುನಿಟ್ಟಿನ ಕ್ರಮ

ಬಳ್ಳಾರಿ ಜಿಲ್ಲಾಡಳಿತ ಇದುವರೆಗೂ ಕೊರೊನಾ ತಡೆಗೆ ತೆಗೆದುಕೊಂಡ ಕ್ರಮಗಳ ಕುರಿತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಗೆ ಮಾಹಿತಿ ನೀಡಿದರು.

home quarantine in bellary
ಅಧಿಕಾರಿಗಳ ಸಭೆ

By

Published : Apr 4, 2020, 6:57 PM IST

ಬಳ್ಳಾರಿ:ಕೋವಿಡ್​-19 ತಡೆಗೆ ಜಿಲ್ಲೆಯಲ್ಲಿ 1204 ಜನರನ್ನು ಹೋಂ ಕ್ವಾರಂಟೈನ್​ ಮಾಡಲಾಗಿದೆ. ಈಗಾಗಲೇ 232 ಜನರು 14 ದಿನಗಳ ಕ್ವಾರಂಟೈನ್​ ಮುಗಿಸಿದ್ದಾರೆ. ಅವರಲ್ಲಿ ಯಾವುದೇ ಸೋಂಕಿನ ಲಕ್ಷಣ ಕಂಡು ಬಂದಿಲ್ಲ. ಆದರೂ ಅವರ ಆರೋಗ್ಯವನ್ನು ವಿಚಾರಿಸಲಾಗುತ್ತಿದೆ ಎಂದು ಜಿಲ್ಲಾಡಳಿತ ಹೇಳಿದೆ.

ಅಧಿಕಾರಿಗಳ ಸಭೆ

ಕೊರೊನಾ ಸೋಂಕಿಗೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತ ಎಂ.ಎಸ್.ಶ್ರೀಕರ್ ಅವರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶನಿವಾರ ನಡೆದ ಸಭೆ ಜಿಲ್ಲೆ ಮಾಹಿತಿ ಪಡೆದರು.

ಬಳ್ಳಾರಿ ಜಿಲ್ಲಾಡಳಿತವು ಇದುವರೆಗೂ ಕೈಗೊಳ್ಳಲಾದ ಕ್ರಮಗಳ ಕುರಿತು ವಿವರವಾದ ಮಾಹಿತಿ ಪಡೆದರು. ಈ ಕುರಿತು ಮುಂದೇ ತೆಗೆದುಕೊಳ್ಳಬೇಕಾದ ಸಿದ್ಧತಾ ಕ್ರಮಗಳು ಕುರಿತು ಅನೇಕ ಸಲಹೆ ಸೂಚನೆಗಳನ್ನು ಇದೇ ಸಂದರ್ಭದಲ್ಲಿ ಅಧಿಕಾರಿಗಳಿಗೆ ನೀಡಿದರು.

ತುರ್ತು ಸಂದರ್ಭದಲ್ಲಿ ರ್ಯಾಪಿಡ್ ರೆಸ್ಪಾನ್ಸ್ ಟೀಂ ಮೂಲಕ ಅವರನ್ನು ಭೇಟಿಯಾಗಿ, ಅವರ ಮೇಲೆ ನಿಗಾವಹಿಸುವ ಕೆಲಸ ಮಾಡಬೇಕು ಎಂದರು.

ABOUT THE AUTHOR

...view details