ಬಳ್ಳಾರಿ: ಹಿಂಬದಿಯಿಂದ ಬಂದ ಲಾರಿಯೊಂದು ಚಲಿಸುತ್ತಿದ್ದ ಕ್ರೂಷರ್ಗೆ ತಾಕಿದ ಪರಿಣಾಮ ಮುಂದೆ ಬಲಬದಿಯಲ್ಲಿ ನಿಂತಿದ್ದ ಟಾಟಾ ಸುಮೋ ವಾಹನಕ್ಕೆ ಡಿಕ್ಕಿ ಹೊಡೆದು ಪರಿಣಾಮ ಕ್ರೂಷರ್ನಲ್ಲಿದ್ದ 12 ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಇಂದು ಜಿಲ್ಲೆಯ ಕುಡಿತಿನಿ ಬಳಿ ನಡೆದಿದೆ.
ಕುಡಿತಿನಿ ಬಳಿ ವಾಹನಗಳ ಡಿಕ್ಕಿ: 12 ಮಂದಿಗೆ ಗಾಯ! - Bellary
ಕುಡಿತಿನಿ ಬಳಿ ಅಪಘಾತವೊಂದು ಸಂಭವಿಸಿದೆ. ವಾಹನಗಳ ಡಿಕ್ಕಿ ರಭಸಕ್ಕೆ 12 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಸಂಡೂರು ತಾಲೂಕಿನ ಗರಗ ನಾಗಲಾಪುರ ಗ್ರಾಮದ ಕ್ರೂಷರ್ ಮಾಲೀಕ ಹಾಗೂ ಚಾಲಕ ಮಂಜುನಾಥ ಎಂಬುವವರಿಗೆ ಮಾತ್ರ ಗಂಭೀರ ಗಾಯಗಳಾಗಿದ್ದು, ಇನ್ನುಳಿದ ಪ್ರಯಾಣಿಕರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಂಡೂರಿನಿಂದ ಬಳ್ಳಾರಿಗೆ ಪ್ರಯಾಣಿಕರನ್ನು ಸಾಗಿಸುತ್ತಿದ್ದ ವೇಳೆ, ಈ ಕ್ರೂಷರ್ ವಾಹನವು ಕುಡಿತಿನಿ ಗ್ರಾಮ ಹೊರವಲಯದ ಅಕ್ವಾಫನ್ - ಕಂಟ್ರಿಕ್ಲಬ್ ಬಳಿ ಸಂಚರಿಸುತ್ತಿರುವಾಗ ಈ ಅಪಘಾತ ಸಂಭವಿಸಿದ್ದು, ಅಪಘಾತದ ಹೊಡೆತಕ್ಕೆ ಕ್ರೂಷರ್ ನಜ್ಜುಗುಜ್ಜಾಗಿದೆ. ಈ ವಾಹನದಲ್ಲಿ ಸಿಲುಕಿಕೊಂಡಿದ್ದ ಪ್ರಯಾಣಿಕರನ್ನು ಹೊರ ತೆಗೆಯಲು ಸಾರ್ವಜನಿಕರು ಹರಸಾಹಸಪಟ್ಟರು.