ಬಳ್ಳಾರಿ/ವಿಜಯನಗರ:ಇಲ್ಲಿಯವರೆಗೆ ಉಭಯ ಜಿಲ್ಲೆಗಳಲ್ಲಿ 753 ಜನರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ರವಿವಾರ 1,156 ಜನರಿಗೆ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 53,931 ಕ್ಕೇರಿದೆ.
ಬಳ್ಳಾರಿ ಜಿಲ್ಲೆಯಲ್ಲಿ ಕೋವಿಡ್ನ ಮೊದಲ ಅವೆಯಲ್ಲಿ 596 ಜನರು ಸಾವನ್ನಪ್ಪಿದ್ದರು. ಎರಡನೇ ಅಲೆಗೆ ಇಂದಿಗೆ 150ಕ್ಕೂ ಹೆಚ್ಚು ಜನರು ಕೊನೆಯುಸಿರೆಳೆದಿದ್ದಾರೆ.
3,454 ಜನರನ್ನು ತಪಾಸಣೆ ಮಾಡಲಾಗಿದ್ದು, ಅದರಲ್ಲಿ 1,156 ಜನರಲ್ಲಿ ಕೋವಿಡ್ ಸೋಂಕು ಇರುವುದು ದೃಢಪಟ್ಟಿದೆ. ಜಿಲ್ಲೆಯಲ್ಲಿ ಇಲ್ಲಿವರೆಗೆ 10,304 ಸಕ್ರಿಯ ಪ್ರಕರಣಗಳಿದ್ದು, ವಿವಿಧ ಆಸ್ಪತ್ರೆಯಲ್ಲಿ ಮತ್ತು ಹೋಮ್ ಕ್ವಾರಂಟೈನ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಿಲ್ಲೆಗಳಲ್ಲಿ ಇಲ್ಲಿಯವರೆಗೆ ಕೇವಲ ಒಂದೆರಡು ಸಾವಿನ ಸಂಖ್ಯೆಗಳು ದಾಖಲಾಗುತ್ತಿದ್ದವು. ಆದರೆ ನಿನ್ನೆ ಒಂದೇ ದಿನ 18 ಜನರು ಬಲಿಯಾಗಿದ್ದಾರೆ. ಇದು ಜನರಲ್ಲಿ ಮತ್ತೆ ಆತಂಕ ಮೂಡಿಸಿದೆ. ಬಳ್ಳಾರಿ ನಗರದಲ್ಲೇ 458 ಅತಿಹೆಚ್ಚು ಪ್ರಕರಣಗಳು ದಾಖಲಾಗಿದೆ. ಹೊಸಪೇಟೆಯಲ್ಲಿ 183, ಸಂಡೂರು 205, ಸಿರುಗುಪ್ಪ 72, ಕೂಡ್ಲಿಗಿ 78, ಹರಪನಹಳ್ಳಿ 63, ಹಗರಿಬೊಮ್ಮನಹಳ್ಳಿ 63, ಹೂವಿನ ಹಡಗಲಿಯಲ್ಲಿ 34 ಸೋಂಕು ಪ್ರಕರಣಗಳು ಪತ್ತೆಯಾಗಿದೆ.