ಕರ್ನಾಟಕ

karnataka

ETV Bharat / state

ಕೋವಿಡ್ 19: ಆರೋಗ್ಯ ಸಚಿವರ ತವರಲ್ಲಿ 108 ಆಂಬ್ಯುಲೆನ್ಸ್​ಗಳ ನಿರಂತರ ತುರ್ತು ಸೇವೆ - 108 Emergency Medical Service

ಕಳೆದ ತಿಂಗಳಿನಿಂದ ಬಳ್ಳಾರಿ ಜಿಲ್ಲೆಯಾದ್ಯಂತ 108 ತುರ್ತು ವೈದ್ಯಕೀಯ ಸೇವೆಯು ಯಾವುದೇ ಅಡಚಣೆಗಳಿಲ್ಲದೆ ಸಾರ್ವಜನಿಕರಿಗೆ ಸೇವೆ ಸಲ್ಲಿಸುವ ಮೂಲಕ ಇಲ್ಲಿಯವರೆಗೆ ಒಟ್ಟು 3262 ತುರ್ತು ಸೇವಾ ಪ್ರಕರಣಗಳನ್ನು ನಿರ್ವಹಿಸಲಾಗಿದೆ. ಇದರಲ್ಲಿ 64 ಕೊರೊನಾ ಸಂಬಂಧಿತ ಸೋಂಕಿತರು, 1664 ಹೆರಿಗೆ, 88 ಅಪಘಾತ, 1446 ಇತರೆ ತುರ್ತು ಸೇವೆ ಸಲ್ಲಿಸಿದ್ದಾರೆ.

108 Emergency Medical Service in Ballary
ಕೊವೈಡ್ 19: ನಿರಂತರವಾಗಿ 108 ತುರ್ತು ವೈದ್ಯಕೀಯ ಸೇವೆ

By

Published : Apr 23, 2020, 11:48 AM IST

ಬಳ್ಳಾರಿ: ಕೊರೊನಾ ವೈರಸ್‌ ಹಿನ್ನೆಲೆಯಲ್ಲಿ ಕಳೆದ ತಿಂಗಳಿನಿಂದ ಜಿಲ್ಲೆಯಾದ್ಯಂತ 108 ತುರ್ತು ವೈದ್ಯಕೀಯ ಸೇವೆಯು ಯಾವುದೇ ಆಡಚಣೆಯಿಲ್ಲದೇ ಸಿಬ್ಬಂದಿ ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 33 ಆಂಬ್ಯುಲೆನ್ಸ್​​​ಗಳು 108 ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಒಟ್ಟು 132 ಸಿಬ್ಬಂದಿ ವರ್ಗದವರು ಸೇವೆ ಸಲ್ಲಿಸುತ್ತಿದ್ದಾರೆ. ರಾಜ್ಯಮಟ್ಟದಲ್ಲಿ ಜಿಲ್ಲೆಯು ಭೌಗೋಳಿಕವಾಗಿ ವಿಸ್ತಾರದಿಂದ ಕೂಡಿದ್ದು, ಈ ಹಿನ್ನೆಲೆಯಲ್ಲಿ ಹರಪನಹಳ್ಳಿ ತಾಲೂಕಿನಿಂದ ದಾವಣಗೆರೆ, ಹಡಗಲಿಯಿಂದ ದಾವಣಗೆರೆ ಮತ್ತು ಹಾವೇರಿ, ಹೊಸಪೇಟೆಯಿಂದ ಕೊಪ್ಪಳ ಜಿಲ್ಲೆಗೂ ಸಹ ತುರ್ತು ವೈದ್ಯಕೀಯ ಸೇವೆಯ ಮೂಲಕ ರೋಗಿಗಳನ್ನು ಕರೆದೊಯ್ಯಲಾಗುತ್ತಿದೆ.

ಕೋವಿಡ್ 19: ನಿರಂತರವಾಗಿ 108 ತುರ್ತು ವೈದ್ಯಕೀಯ ಸೇವೆ

ಜಿಲ್ಲೆಯ ತುರ್ತು ಪರಿಸ್ಥಿತಿ ನಿರ್ವಹಣೆಯ ಜಿಲ್ಲಾ ವ್ಯವಸ್ಥಾಪಕ ವಿನಯ್ ಕುಮಾರ್.ಪಿ ಅವರ ನೇತೃತ್ವದಲ್ಲಿ ಯಾವುದೇ ಅಡಚಣೆಗಳಿಲ್ಲದೆ ಸಾರ್ವಜನಿಕರಿಗೆ ಸೇವೆ ಸಲ್ಲಿಸುವ ಮೂಲಕ ಇಲ್ಲಿಯವರೆಗೆ ಒಟ್ಟು 3262 ತುರ್ತು ಸೇವಾ ಪ್ರಕರಣಗಳನ್ನು ನಿರ್ವಹಿಸಲಾಗಿದೆ. ಇದರಲ್ಲಿ 64 ಕೊರೊನಾ ಸಂಬಂಧಿತ ಸೋಂಕಿತರು, 1664 ಹೆರಿಗೆ, 88 ಅಪಘಾತ, 1446 ಇತರೆ ತುರ್ತು ಸೇವೆಗಳನ್ನು ನಿರ್ವಹಿಸಿದ್ದಾರೆ.

ಕರ್ತವ್ಯ ನಿರ್ವಹಿಸುವ ಎಲ್ಲಾ ಸಿಬ್ಬಂದಿ ವರ್ಗದವರಿಗೆ ಸುರಕ್ಷತೆಗಾಗಿ ಪಿ.ಪಿ.ಇ.ಕಿಟ್, ಸ್ಯಾನಿಟೈಜರ್, ಮಾಸ್ಕ್ ಮತ್ತು ಹ್ಯಾಂಡ್ ಗ್ಲೌಸ್‌ಗಳನ್ನು ಒದಗಿಸಿ ಸಿಬ್ಬಂದಿಯ ಸುರಕ್ಷತೆಯನ್ನು ಸಹ ಕಾಪಾಡಲಾಗಿದೆ. ಇದರ ಜೊತೆಗೆ ಕೊರೊನಾ ವೈರಸ್‌ನ ಕುರಿತ ಮುಂಜಾಗ್ರತೆಯ ಬಗ್ಗೆ ಸಹ ಮಾಹಿತಿಯನ್ನು ನಿರಂತರವಾಗಿ ಸಿಬ್ಬಂದಿಯವರು ನೀಡುತ್ತಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ABOUT THE AUTHOR

...view details