ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ತುಂಬರಗುದ್ದಿ ಗ್ರಾಮದಲ್ಲಿ ನೆಲೆಸಿರುವ ಶತಾಯುಷಿ ದಂಪತಿಗಳಿಬ್ಬರು ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ.
ಪತಿಗೆ 103, ಪತ್ನಿಗೆ 101... ಮನೆಯಲ್ಲಿದ್ದುಕೊಂಡೇ ಕೊರೊನಾ ಗೆದ್ದ ದಂಪತಿ - old age people win corona
ಶತಾಯುಷಿ ದಂಪತಿಗಳು ಕೊರೊನಾದಿಂದ ಗುಣಮುಖರಾಗಿದ್ದಾರೆ. ಸಂಡೂರು ತಾಲೂಕಿನ ತುಂಬರಗುದ್ದಿ ಗ್ರಾಮದ ದಂಪತಿ ಹೋಂ ಕ್ವಾರಂಟೈನ್ನಲ್ಲಿದ್ದುಕೊಂಡೇ ಸೋಂಕಿನಿಂದ ಗುಣಮುಖರಾಗಿದ್ದಾರೆ.
100 years old
ತುಂಬರಗುದ್ದಿ ಗ್ರಾಮದ ಈರಣ್ಣ (103) ಹಾಗೂ ಈರಮ್ಮ (101) ಕೊರೊನಾ ಸೋಂಕಿನ ವಿರುದ್ಧ ಗೆದ್ದ ದಂಪತಿ.
ಕಳೆದ 15 ದಿನಗಳ ಹಿಂದೆಯೇ ಇಬ್ಬರಿಗೂ ಕೊರೊನಾ ಪಾಸಿಟಿವ್ ಬಂದಿತ್ತು. ಬಳಿಕ 12 ದಿನಗಳ ಕಾಲ ಹೋಂ ಕ್ವಾರಂಟೈನ್ನಲ್ಲಿದ್ದುಕೊಂಡೇ ಚಿಕಿತ್ಸೆ ಪಡೆದು ಇದೀಗ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ.