ಕರ್ನಾಟಕ

karnataka

ETV Bharat / state

ವಿಜಯನಗರ ಜಿಲ್ಲೆಯಲ್ಲಿ ಧಾರಾಕಾರ ಮಳೆಗೆ ಮೈದುಂಬಿತು 100 ಎಕರೆಯ ಕೆರೆ - ವಿಜಯನಗರ ಕೆರೆ ಭರ್ತಿ

ವಿಜಯನಗರ ಜಿಲ್ಲೆಯಲ್ಲಿ ಭಾರಿ ಮಳೆಯಾಗಿದ್ದು, ಇದರಿಂದ ಕಳೆದ 10-15 ವರ್ಷಗಳವರೆಗೆ ತುಂಬದ ಕೆರೆ ಇದೀಗ ಉಕ್ಕಿ ಹರಿದು ಕೋಡಿಬಿದ್ದಿದೆ.

vijayangar
ವಿಜಯನಗರ ಜಿಲ್ಲೆಯಲ್ಲಿ ಭಾರಿ ಮಳೆ

By

Published : Jul 18, 2021, 1:19 PM IST

ಹೊಸಪೇಟೆ (ವಿಜಯನಗರ): 10 ವರ್ಷಗಳಿಂದ ಬರಡಾಗಿದ್ದು ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಚಟ್ನಳ್ಳಿ ಕೆರೆ ತುಂಬಿ ತುಳುಕುತ್ತಿದೆ. ಈ ಕೆರೆ 100 ಎಕೆರೆ ವ್ಯಾಪ್ತಿಯನ್ನು ಹೊಂದಿದೆ.

ಒಂದು ರಾತ್ರಿಯಲ್ಲಿ‌ ಸುರಿದ ಧಾರಾಕಾರ ಮಳೆಗೆ ನೀರು ತುಂಬಿದ್ದು, ಕೋಡಿ ಒಡೆದಿದೆ. ಅಲ್ಲದೇ, ಉಚ್ಚಂಗಿ ದುರ್ಗ ಭಾಗದ ರಾಮಘಟ್ಟ, ಚಟ್ನಳ್ಳಿ, ಕುರೆ ಮಾಗೇನಹಳ್ಳಿ, ಕೆಂಚಾಪುರ ಭಾಗದಲ್ಲಿ‌ ಭಾರಿ ಮಳೆಯಾಗಿದೆ. ಹೀಗಾಗಿ ಈ‌ ಭಾಗದ ರೈತರಲ್ಲಿ‌ ಸಂತಸ ಮೂಡಿದೆ.

ವಿಜಯನಗರ ಜಿಲ್ಲೆಯಲ್ಲಿ ಭಾರಿ ಮಳೆ

ಈ ಬಗ್ಗೆ ಮಾತನಾಡಿದ ರೈತ ಲಿಂಗರಾಜ ಎಂಬುವರು, ಶನಿವಾರ ರಾತ್ರಿ ಹರಪನಹಳ್ಳಿಯಲ್ಲಿ ಧಾರಾಕಾರ ಮಳೆಯಾಗಿದ್ದು, ಇದರಿಂದ ಕಳೆದ 10-15 ವರ್ಷಗಳವರೆಗೆ ತುಂಬದ ಕೆರೆ ತುಂಬಿ ಕೋಡಿ‌ ಬಿದ್ದಿದೆ ಎಂದರು.

ABOUT THE AUTHOR

...view details