ಕರ್ನಾಟಕ

karnataka

ETV Bharat / state

ತಂದೆ ಬೈದರೆಂದು ಬುದ್ಧಿಮಾಂದ್ಯ ಪುತ್ರ ಹತ್ತಿದ್ದ ರೈಲು.. ಕೊನೆಗೂ ನೆಮ್ಮದಿ ನೀಡಿತು ತಾಯಿ ಮಡಿಲು - ತಂದೆ ಬೈದರೆಂದು ಬುದ್ಧಿಮಾಂದ್ಯ ಪುತ್ರ ಹತ್ತಿದ್ದ ರೈಲು

ಟಿಕೆಟ್​ ಇಲ್ಲದೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ತಪಾಸಣಾಧಿಕಾರಿ ವಿಚಾರಿಸಿದ್ದಾರೆ. ಈ ವೇಳೆ ರೈಲ್ವೆ ಸಿಬ್ಬಂದಿಗೆ ವಿಷಯ ತಿಳಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಬಳಿಕ ಪೊಲೀಸರು ಆತನ ವಿಚಾರಣೆ ನಡೆಸಿದಾಗ ತಾಯಿಯ ಕುರಿತು ಹೇಳಿದ್ದಾನೆ..

.ಕೊನೆಗೂ ನೆಮ್ಮದಿ ನೀಡಿತು ತಾಯಿ ಮಡಿಲು
.ಕೊನೆಗೂ ನೆಮ್ಮದಿ ನೀಡಿತು ತಾಯಿ ಮಡಿಲು

By

Published : Jul 2, 2021, 11:05 AM IST

ಬಳ್ಳಾರಿ :ತಂದೆ ಗದರಿಸಿ ಮಾತನಾಡಿದ್ದ ಎಂದು ಮನೆ ಬಿಟ್ಟು ಬೆಂಗಳೂರು ಸೇರಿದ್ದ ಬುದ್ಧಿಮಾಂದ್ಯ ಬಾಲಕನನ್ನು ಪೊಲೀಸರು ಸುರಕ್ಷಿತವಾಗಿ ತಾಯಿಯ ಮಡಿಲು ಸೇರಿಸಿದ್ದಾರೆ. ಬಳ್ಳಾರಿ‌ ಜಿಲ್ಲೆಯ‌ ಕಂಪ್ಲಿ ತಾಲೂಕಿನ‌ ದೇವಲಾಪುರ ಗ್ರಾಮದ ನಿವಾಸಿ ಜಾನೂರು ಹನುಮಂತಪ್ಪನ 14 ವರ್ಷದ ಪುತ್ರ ರೇವಣಸಿದ್ದ ಮನೆ ಬಿಟ್ಟು ಬೆಂಗಳೂರು ತಲುಪಿ ಈಗ ತಾಯಿ ಮಡಿಲು ಸೇರಿದ್ದಾನೆ.

ಏನಿದು ಪ್ರಕರಣ..?

ದೇವಲಾಪುರ ಗ್ರಾಮದಲ್ಲಿ ತಂದೆ ಜಾನೂರು ಹನುಮಂತಪ್ಪನೊಂದಿಗೆ ವಾಸವಿದ್ದ ಬುದ್ಧಿಮಾಂದ್ಯ ಪುತ್ರ ರೇವಣಸಿದ್ಧನಿಗೆ ಶಾಲೆಗೂ ಹೋಗುವ ಹಾಗಿಲ್ಲ ಕುರಿನೂ ಕಾಯೋ ಹಾಗಿಲ್ಲ ಎಂದು ಗದರಿಸಿದ್ದನಂತೆ. ಇದರಿಂದ ಮನನೊಂದ ಪುತ್ರ ರೇವಣಸಿದ್ದ ಬುಧವಾರ ರಾತ್ರಿ ಮನೆ ಬಿಟ್ಟು ಬೆಂಗಳೂರಲ್ಲಿ ಕೂಲಿ ಮಾಡುತ್ತಿದ್ದ ತಾಯಿ ಶಂಕ್ರಮ್ಮನನ್ನು ನೋಡಲು ರೈಲು ಹತ್ತಿದ್ದಾನೆ.

ಆದರೆ, ಟಿಕೆಟ್​ ಇಲ್ಲದೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ತಪಾಸಣಾಧಿಕಾರಿ ವಿಚಾರಿಸಿದ್ದಾರೆ. ಈ ವೇಳೆ ರೈಲ್ವೆ ಸಿಬ್ಬಂದಿಗೆ ವಿಷಯ ತಿಳಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಬಳಿಕ ಪೊಲೀಸರು ಆತನ ವಿಚಾರಣೆ ನಡೆಸಿದಾಗ ತಾಯಿಯ ಕುರಿತು ಹೇಳಿದ್ದಾನೆ. ತಕ್ಷಣ ಬೆಂಗಳೂರಲ್ಲಿ ಕಟ್ಟಡ ನಿರ್ಮಾಣ ಕಾರ್ಯ ಮಾಡುತ್ತಿದ್ದ ಆತನ ತಾಯಿಯನ್ನು ಹುಡುಕಿ ಆಕೆಯ ಮಡಿಲು ಸೇರಿಸಿದ್ದಾರೆ.

ಓದಿ:ಹೊಸಪೇಟೆಯಲ್ಲಿ ವೃದ್ಧನ ಮೇಲೆ ಹಲ್ಲೆ ಪ್ರಕರಣ: ಶಾಸಕ ಪರಮೇಶ್ವರ್​ ನಾಯ್ಕ್​​ ಸಹೋದರನ ವಿರುದ್ಧ ಕೇಸ್​

ABOUT THE AUTHOR

...view details