ಕರ್ನಾಟಕ

karnataka

By

Published : Sep 23, 2020, 12:33 AM IST

ETV Bharat / state

ಬೆಳಗಾವಿ ಜಿಲ್ಲೆಯಲ್ಲಿ 20 ಸಾವಿರ ಸಸಿ ನೆಡುವ ಗುರಿ: ಜಿಪಂ ಸಿಇಒ ದರ್ಶನ್

ಬೆಳಗಾವಿ ಜಿಲ್ಲಾ ಪಂಚಾಯತಿಯಲ್ಲಿ ನಡೆದ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಪಂಚಾಯತಿ ಚಿಇಒ ಸಿಇಒ ಎಚ್​​.ವಿ. ದರ್ಶನ್, ತೋಟಗಾರಿಕಾ ಇಲಾಖೆ ವತಿಯಿಂದ ಶಾಲಾ- ಕಾಲೇಜು, ಅಂಗನವಾಡಿಗಳಲ್ಲಿ ಪಂಚಾಯಿತ ವತಿಯಿಂದ ಎಲ್ಲೆಲ್ಲಿ ಸ್ಥಳಾವಕಾಶ ದೊರೆಯುತ್ತದೆ ಅಲ್ಲಿ ನ್ಯೂಟ್ರಿಷನ್ ಉದ್ಯಾನ ನಿರ್ಮಾಣ ಮಾಡಲಾಗುವುದು. ಕೃಷಿ ಇಲಾಖೆಯಿಂದ ಜಲಾಮೃತ ಯೋಜನೆಯಲ್ಲಿ ಹೆಚ್ಚು ಕೆರೆಗಳನ್ನು ನಿರ್ಮಿಸುತ್ತೇವೆ. ಕೃಷಿ ಹೊಂಡ ನಿರ್ಮಾಣ, ಕಾಲುವೆಗಳ ಬಳಿ ಸಸಿ ನೆಡುವ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

zp Meeting of Panchayat Development Officers headed by CEO of  Darshan H. V
ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಸಭೆ

ಅಥಣಿ:ಬೆಳಗಾವಿ ಜಿಲ್ಲೆಯನ್ನು ರಾಜ್ಯದಲ್ಲಿ ಮಾದರಿ ಪಥದತ್ತ ಕೊಂಡೊಯ್ಯುವ ಗುರಿ ಹೊಂದಲಾಗಿದ್ದು, ಎಲ್ಲಾ ಪಂಚಾಯತಿ ಸದಸ್ಯರು, ಅಧಿಕಾರಿಗಳು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ಜಿಲ್ಲಾ ಪಂಚಾಯತಿ ಸಿಇಒ ಎಚ್​​.ವಿ. ದರ್ಶನ್ ಹೇಳಿದರು.

ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಸಭೆಯು ಬೆಳಗಾವಿ ಜಿಲ್ಲಾ ಪಂಚಾಯತಿಯಲ್ಲಿ ನಡೆಯಿತು. ಈ ವೇಳೆ ಮಾತನಾಡಿದ ಅವರು ತೋಟಗಾರಿಕಾ ಇಲಾಖೆ ವತಿಯಿಂದ ಶಾಲಾ- ಕಾಲೇಜು, ಅಂಗನವಾಡಿಗಳಲ್ಲಿ ಪಂಚಾಯತಿ ವತಿಯಿಂದ ಎಲ್ಲೆಲ್ಲಿ ಸ್ಥಳಾವಕಾಶ ದೊರೆಯುತ್ತದೆ ಅಲ್ಲಿ ನ್ಯೂಟ್ರಿಷನ್ ಉದ್ಯಾನ ನಿರ್ಮಾಣ ಮಾಡಲಾಗುವುದು. ಕೃಷಿ ಇಲಾಖೆಯಿಂದ ಜಲಾಮೃತ ಯೋಜನೆಯಲ್ಲಿ ಹೆಚ್ಚು ಕೆರೆಗಳನ್ನು ನಿರ್ಮಿಸುತ್ತೇವೆ. ಕೃಷಿ ಹೊಂಡ ನಿರ್ಮಾಣ, ಕಾಲುವೆಗಳ ಬಳಿ ಸಸಿ ನೆಡುವ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಪಂಚಾಯತಿ ಅಭಿವೃದ್ಧ ಸಭೆ ಬಳಿಕ ಮಾತನಾಡಿದ ಎಚ್​.ವಿ . ದರ್ಶನ್
ಪ್ರತಿಯೊಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕನಿಷ್ಠ ಐದು ಎಕರೆಯಷ್ಟು ಸ್ಥಳ ಗುರುತಿಸಿ ಘನ ಮತ್ತು ದ್ರವ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಬೇಕು. ಗೋಮಾಳ, ಗೋಕುಂಟೆ ಕೆರೆಕಟ್ಟೆ, ಗೋಕಟ್ಟೆಗಳಲ್ಲಿ ಸಸಿ ನೆಡಬೇಕು. ಪ್ರತಿ ಎಕರೆಗೆ 160 ಸಸಿ ನೆಡುವ ಮೂಲಕ ಸುಮಾರು 20,000 ಸಸಿ ನೆಡುವ ಯೋಜನೆ ಹಾಕಿಕೊಂಡಿದ್ದೇವೆ ಎಂದು ಹೇಳಿದರು.

ABOUT THE AUTHOR

...view details