ಚಿಕ್ಕೋಡಿ : ದಾರಿಯಲ್ಲಿ ಸಿಕ್ಕ 22 ಸಾವಿರ ನಗದನ್ನುಮಾಲೀಕರಿಗೆ ಮರಳಿಸುವ ಮೂಲಕ ಇಬ್ಬರು ಯುವಕರು ಪ್ರಾಮಾಣಿಕತೆ ಮೆರೆದಿದ್ದಾರೆ.
ದಾರಿಯಲ್ಲಿ ಸಿಕ್ಕ ಹಣ ಮರಳಿಸಿ ಪ್ರಾಮಾಣಿಕತೆ ಮೆರೆದ ಯುವಕರು - ಯುವಕರು
ರಸ್ತೆಯಲ್ಲಿ ಸಿಕ್ಕ 22 ಸಾವಿರ ನಗದು ರೂ. ವನ್ನ ಮರಳಿ ಮಾಲೀಕರಿಗೆ ಒಪ್ಪಿಸುವ ಮೂಲದ ಇಬ್ಬರು ಯುವಕರು ಪ್ರಾಮಾಣಿಕತೆ ಮೆರೆದಿದ್ದಾರೆ.
ನಿಪ್ಪಾಣಿ ತಾಲೂಕಿನ ನಾಗನೂರ ಗ್ರಾಮದ ಸಾಮಾಜಿಕ ಕಾರ್ಯಕರ್ತ ಅಮೃತ ಢೋಲೆ ಮತ್ತು ಪತ್ರಕರ್ತ ದಾದಾ ಜನವಾಡೆ ಅವರಿಗೆ ರಸ್ತೆಯಲ್ಲಿ 22 ಸಾವಿರ ನಗದು ಸಿಕ್ಕಿದ್ದು ಮಾಲೀಕರಿಗಾಗಿ ಸುತ್ತಮುತ್ತ ಶೋಧಿಸಿದ್ದಾರೆ.
ಹಣ ಕಳೆದುಕೊಂಡವರು ಇದೇ ಮಾರ್ಗವಾಗಿ ಬರಬಹುದು ಎಂದು ಭಾವಿಸಿ ಅರ್ಧ ಗಂಟೆ ಅಲ್ಲಿಯೇ ಕುಳಿತು ಕಾದು, ಹಣ ಕಳೆದುಕೊಂಡ ನಿಪ್ಪಾಣಿ ತಾಲೂಕಿನ ಜತ್ರಾ ಗ್ರಾಮದ ಬಾಳು ಕೋಳಿ ಎಂಬಾತ ಬಂದಾಗ ಅವರನ್ನು ವಿಚಾರಿಸಿ ಹೆಚ್ಚಿನ ಮಾಹಿತಿ ಪಡೆದ ಬಳಿಕ ನಗರಸಭೆ ಮಾಜಿ ಸದಸ್ಯ ಧನಾಜಿ ನಿರ್ಮಳೆ ಮತ್ತು ಬಾಳಾಸಾಹೇಬ ಗಡಕರಿ ಅವರ ಸಮ್ಮುಖದಲ್ಲಿ ಹಣ ಮರಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.