ಕರ್ನಾಟಕ

karnataka

ETV Bharat / state

ದೂಧಗಂಗಾ ನದಿಯಲ್ಲಿ ಮುಳುಗುತ್ತಿದ್ದ ಐವರು: ಪ್ರಾಣದ ಹಂಗು ತೊರೆದು ರಕ್ಷಿಸಿದ ಯುವಕರು - ದೂಧಗಂಗಾ ನದಿ,

ದೂಧಗಂಗಾ ನದಿಯಲ್ಲಿ ಮುಳುಗುತ್ತಿರುವ ಐವರನ್ನು ಯುವಕರಿಬ್ಬರು ಪ್ರಾಣದ ಹಂಗು ತೊರೆದು ರಕ್ಷಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನಲ್ಲಿ ನಡೆದಿದೆ.

youths rescued five members, youths rescued five drowning, youths rescued five drowning in Dudhganga River, Dudhganga River news, ಐವರನ್ನು ರಕ್ಷಿಸಿದ ಯುವಕರು, ದೂಧಗಂಗಾ ನದಿಯಲ್ಲಿ ಮುಳಗುತ್ತಿರುವ ಐವರನ್ನು ರಕ್ಷಿಸಿದ ಯುವಕರು, ದೂಧಗಂಗಾ ನದಿ, ದೂಧಗಂಗಾ ನದಿ ಸುದ್ದಿ,
ದೂಧಗಂಗಾ ನದಿಯಲ್ಲಿ ಮುಳಗುತ್ತಿದ್ದ ಐವರನ್ನು ರಕ್ಷಿಸಿದ ಇಬ್ಬರು

By

Published : Feb 17, 2021, 11:09 AM IST

ಚಿಕ್ಕೋಡಿ :ಈಜು ಬಾರದೆ ನೀರಲ್ಲಿ ಮುಳುಗುತ್ತಿದ್ದ ಮೂವರು ಯುವಕರು ಮತ್ತು ಯುವತಿರಿಬ್ಬರನ್ನು ಕಾಪಾಡಿ ಯುವಕರಿಬ್ಬರು ಮಾನವೀಯತೆ ಮೆರೆದಿರುವ ಘಟನೆ ಸದಲಗಾ ಪಟ್ಟಣದ ಹೊರ ವಲಯದಲ್ಲಿ ನಡೆದಿದೆ.

ದೂಧಗಂಗಾ ನದಿಯಲ್ಲಿ ಮುಳುಗುತ್ತಿದ್ದ ಐವರನ್ನು ರಕ್ಷಿಸಿದ ಇಬ್ಬರು

ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದ ಹೊರವಲಯದಲ್ಲಿ ಹರಿಯುತ್ತಿರುವ ದೂಧಗಂಗಾ ನದಿಯಲ್ಲಿ ಇಬ್ಬರು ಯುವತಿಯರು ಮತ್ತು ಮೂವರು ಯುವಕರು ನೀರಾಟವಾಡಲು ತೆರಳಿದ್ದಾರೆ. ಈಜು ಬಾರದೆ ನೀರಲ್ಲಿ ಮುಳಗುತ್ತಿದ್ದ ಆ ಐವರನ್ನು ನಿಪ್ಪಾಣಿ ತಾಲೂಕಿನ ಮಾಣಕಾಪೂರ ಗ್ರಾಮದ ನಿವಾಸಿಗಳಾದ ಅಮೋಲ ಚೌಗಲೆ ಮತ್ತು ಸಂದೀಪ ಬನ್ನೆ ಎಂಬ ಇಬ್ಬರು ಯುವಕರು 20 ಅಡಿ ಎತ್ತರದಿಂದ ನದಿಗೆ ಹಾರಿ ರಕ್ಷಣೆ ಮಾಡಿದ್ದಾರೆ. ಈ ಘಟನೆ ಸೋಮವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ದೂಧಗಂಗಾ ನದಿಯಲ್ಲಿ ಮುಳುಗುತ್ತಿದ್ದ ಐವರನ್ನು ರಕ್ಷಿಸಿದ ಇಬ್ಬರು

ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಚಿಪಳುನ್​ನಿಂದ ಚಿಕ್ಕೋಡಿ ತಾಲೂಕಿನ ಕರೋಶಿಗೆ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಯುವಕ-ಯುವತಿಯರು ಆಗಮಿಸಿದ್ದರು. ಇಚಲಕರಂಜಿಗೆ ಬಟ್ಟೆ ಖರೀದಿಗಾಗಿ ತೆರಳುವಾಗ ಮಾರ್ಗ ಮಧ್ಯದಲ್ಲಿ ಸದಲಗಾ ಪಟ್ಟಣದ ಬಳಿಯಲ್ಲಿ ತುಂಬಿ ಹರಿಯುತ್ತಿರುವ ನದಿಯಲ್ಲಿ ನೀರಾಟವಾಡಲು ತೆರಳಿದ್ದಾರೆ. ಈಜು ಬಾರದ ಹಿನ್ನೆಲೆ ಆಶೀಯಾನಾ, ಮೈನುದ್ದೀನ, ಆಲಿಯಾ ಮಾಂಡೇಕರ, ಜುನೇದ ಶೇಖ್ ಸೇರಿದಂತೆ ಐವರು ನೀರಿನಲ್ಲಿ ಮುಳುಗುತ್ತಿದ್ದರು.

ದೂಧಗಂಗಾ ನದಿಯಲ್ಲಿ ಮುಳುಗುತ್ತಿದ್ದ ಐವರನ್ನು ರಕ್ಷಿಸಿದ ಇಬ್ಬರು

ಅಮೋಲ ಚೌಗಲೆ ಮತ್ತು ಸಂದೀಪ ಬನ್ನೆ ಇದೇ ಮಾರ್ಗವಾಗಿ ತೆರಳುವಾಗ ಯುವಕ ಯುವತಿಯರ ಚೀರಾಟ-ಕೂಗಾಟ ಕೇಳಿ ಬೈಕ್ ನಿಲ್ಲಿಸಿ 20 ಅಡಿ ಎತ್ತರದಿಂದ ನದಿಗೆ ಹಾರಿ ಐವರನ್ನು ರಕ್ಷಣೆ ಮಾಡಿ ಸಾಹಸ ಮೆರೆದಿದ್ದಾರೆ. ರಕ್ಷಣೆ ಮಾಡಿದ ಐವರ ಪೈಕಿ ಓರ್ವ ಯುವತಿಯ ಸ್ಥಿತಿ ಚಿಂತಾಜನಕವಾಗಿದ್ದು, ಮಹಾರಾಷ್ಟ್ರದ ಇಚಲಕರಂಜಿ ಪಟ್ಟಣದ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಸದಲಗಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ABOUT THE AUTHOR

...view details