ಕರ್ನಾಟಕ

karnataka

ETV Bharat / state

ಶೌಚಾಲಯ ನಿರ್ಮಿಸುವ ವಿಚಾರದಲ್ಲಿ ಅಣ್ಣನನ್ನೇ ಚಾಕುವಿನಿಂದ ಇರಿದು ಕೊಲೆ ಮಾಡಿದ ತಮ್ಮ! - ಅಣ್ಣನನ್ನೇ ಚಾಕುವಿನಿಂದ ಇರಿದು ಕೊಲೆ ಮಾಡಿದ ತಮ್ಮ

ಶೌಚಾಲಯ ನಿರ್ಮಿಸುವ ವಿಚಾರದಲ್ಲಿ ಪ್ರಾರಂಭವಾದ ಅಣ್ಣ-ತಮ್ಮನ ಜಗಳ ಕೊನೆಗೆ ಕೊಲೆಯಲ್ಲಿ ಅಂತ್ಯವಾಗಿದೆ. ಕೊಲೆ ಮಾಡಿದ ನಂತರ ಆರೋಪಿ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.

younger brother kills his elder brother for trivial issue
younger brother kills his elder brother for trivial issue

By

Published : Apr 15, 2021, 8:27 PM IST

ಚಿಕ್ಕೋಡಿ (ಬೆಳಗಾವಿ):ಶೌಚಾಲಯ ನಿರ್ಮಿಸುವ ವಿಚಾರದಲ್ಲಿ ತಮ್ಮನೇ ಅಣ್ಣನನ್ನು ಚಾಕುವಿನಿಂದ ಬರ್ಬರವಾಗಿ ಕೊಲೆ ಮಾಡಿರುವ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನೇಜ ಗ್ರಾಮದಲ್ಲಿ ಘಟನೆ ನಡೆದಿದೆ. ಭರಮು ಶಿವಾಜಿ ಕೋಳಿ (30) ಕೊಲೆಯಾದ ವ್ಯಕ್ತಿಯಾಗಿದ್ದು, ಬಂಡು ಶಿವಾಜಿ ಕೋಳಿ (28) ಕೊಲೆ ಮಾಡಿದ ಆರೋಪಿ. ಭರಮು ಕೋಳಿ ಶೌಚಾಲಯ ಕಟ್ಟಲು ಗುಂಡಿ ಅಗೆದಿದ್ದ. ಗುಂಡಿಯಲ್ಲಿನ ನೀರು ತಮ್ಮನಾದ ಬಂಡು ಕೋಳಿಯ ಮನೆಯ ಹತ್ತಿರ ಹೋಗುತ್ತಿತ್ತು.

ಇದರಿಂದ ನನ್ನ ಮನೆಯ ಹತ್ತಿರ ನೀರು ಯಾಕೆ ಬಿಡುತ್ತಿದ್ದೀಯಾ ಎಂದು ಪ್ರಾರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಈ ಘಟನೆ ಬುಧವಾರ ರಾತ್ರಿ 10 ಗಂಟೆ ಸುಮಾರಿಗೆ ನಡೆದಿದ್ದು, ಕೊಲೆ ಮಾಡಿದ ನಂತರ ಆರೋಪಿ ಬಂಡು ಸದಲಗಾ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ಈ ಕುರಿತು ಸದಲಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details