ಕರ್ನಾಟಕ

karnataka

By

Published : Mar 11, 2021, 8:06 AM IST

ETV Bharat / state

ಸ್ಕೂಟಿಗೆ ಟ್ರಕ್ ಡಿಕ್ಕಿ: 21 ವರ್ಷದ ಯುವತಿ ಸ್ಥಳದಲ್ಲೇ ಸಾವು

ತಂದೆ - ಮಗಳು ಸ್ಕೂಟಿಯಲ್ಲಿ ತೆರಳುತ್ತಿದ್ದ ವೇಳೆ ರಭಸವಾಗಿ ಬಂದ ಟ್ರಕ್​ವೊಂದು ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಯುವತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.

Young woman died, Young woman died in  road accident, Young woman died in  road accident at Belagavi, Belagavi road accident, Belagavi road accident news, ಯುವತಿ ಸಾವು, ರಸ್ತೆ ಅಪಘಾತದಲ್ಲಿ ಯುವತಿ ಸಾವು, ಬೆಳಗಾವಿಯಲ್ಲಿ ರಸ್ತೆ ಅಪಘಾತದಲ್ಲಿ ಯುವತಿ ಸಾವು, ಬೆಳಗಾವಿ ರಸ್ತೆ ಅಪಘಾತ, ಬೆಳಗಾವಿ ರಸ್ತೆ ಅಪಘಾತ ಸುದ್ದಿ,
21 ವರ್ಷದ ಯುವತಿ ಸ್ಥಳದಲ್ಲೇ ಸಾವು

ಬೆಳಗಾವಿ:ಸ್ಕೂಟಿಗೆ ಟ್ರಕ್‍ವೊಂದು ಡಿಕ್ಕಿ ಹೊಡೆದ ಪರಿಣಾಮ ಯುವತಿಯೊಬ್ಬಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗಡಿ ಪ್ರದೇಶ ಶಿನ್ನೋಳಿ ಗ್ರಾಮದಲ್ಲಿ ನಡೆದಿದೆ.

ಮೃತ ಯುವತಿ ಮಹಾರಾಷ್ಟ್ರದ ಮೂಲದ ಚಂದಗಡ ತಾಲೂಕಿನ ಶಿವಂಗೆ ಗ್ರಾಮದ ವೈಷ್ಣವಿ ವಿಶ್ವಾಸ ಪಾಟೀಲ್ (21) ಎಂದು ಗುರುತಿಸಲಾಗಿದೆ. ಮೃತ ಯುವತಿಯ ತಂದೆ ವಿಶ್ವಾಸ ತುಕಾರಾಮ್ ಪಾಟೀಲ್‍ಗೆ ಗಂಭೀರ ಗಾಯವಾಗಿದೆ.

ಶಿವಂಗೆಯಿಂದ ಬೆಳಗಾವಿಗೆ ಶಿನ್ನೋಳಿ ಬಳಿ ಅಪ್ಪ-ಮಗಳು ಬರುತ್ತಿದ್ದ ವೇಳೆ ಸ್ಕೂಟಿಗೆ ವೇಗವಾಗಿ ಬಂದ ಟ್ರಕ್ ಡಿಕ್ಕಿ ಹೊಡೆದಿದೆ. ಯುವತಿ ಟ್ರಕ್ ಟಯರ್ ಕೆಳಗೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.

ಈ ಘಟನೆ ಕುರಿತು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ABOUT THE AUTHOR

...view details