ಕರ್ನಾಟಕ

karnataka

ETV Bharat / state

ನದಿಗೆ ಹಾರಿ ಆತ್ಮಹತ್ಯೆಗೆ ವೃದ್ಧೆ ಯತ್ನ; ಪ್ರಾಣದ ಹಂಗು ತೊರೆದು ಅಜ್ಜಿ ರಕ್ಷಿಸಿದ ಯುವಕ - ಖಾನಾಪುರ ಪೊಲೀಸ್ ‌ಠಾಣೆ

ಬೆಳಗಾವಿ ಜಿಲ್ಲೆಯ ಖಾನಾಪುರ ‌ತಾಲೂಕಿನ ಬಸ್ಸಾಪುರ ಗ್ರಾಮದ ಬಾಳಮ್ಮ ನಾವಳಗಿ ಎಂಬ ವೃದ್ಧೆ ಆತ್ಮಹತ್ಯೆಗೆ ಯತ್ನಿಸಿದ್ದರು. ಈ ವೇಳೆ ಯುವಕನೊಬ್ಬ ಸಮಯಪ್ರಜ್ಞೆಯಿಂದ ಅವರನ್ನು ರಕ್ಷಿಸಿದ್ದಾನೆ.

ಪ್ರಾಣದ ಹಂಗು ತೊರೆದು ಅಜ್ಜಿ ರಕ್ಷಿಸಿದ ಯುವಕ
ಪ್ರಾಣದ ಹಂಗು ತೊರೆದು ಅಜ್ಜಿ ರಕ್ಷಿಸಿದ ಯುವಕ

By

Published : Oct 6, 2022, 7:42 PM IST

ಬೆಳಗಾವಿ:ಮಲಪ್ರಭ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ವೃದ್ಧೆಯನ್ನು ರಕ್ಷಿಸುವ ಮೂಲಕ ಯುವಕ ಸಾಹಸ ಮೆರೆದಿರುವ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ‌ತಾಲೂಕಿನ ಪಾರಿಶ್ವಾಡ ಗ್ರಾಮದಲ್ಲಿ ನಡೆದಿದೆ.

ಬಾಳಮ್ಮ ನಾವಳಗಿ

ಖಾನಾಪುರ ‌ತಾಲೂಕಿನ ಬಸಾಪುರ ಗ್ರಾಮದ ಬಾಳಮ್ಮ‌ ನಾವಳಗಿ (90) ಆತ್ಮಹತ್ಯೆಗೆ ಯತ್ನಿಸಿದ್ದರು. ವೃದ್ಧೆ ನದಿಗೆ ಹಾರಿದ್ದನ್ನು ಯುವಕ ಗಮನಿಸಿದ್ದಾನೆ. ತಕ್ಷಣವೇ ಪ್ರಾಣದ ಹಂಗು ತೊರೆದು ನದಿಗೆ ಹಾರಿ ರಕ್ಷಣೆ ಮಾಡಿದ್ದಾನೆ. ಪಾರಿಶ್ವಾಡ ಗ್ರಾಮದ ಐಜಾಜ್ ಮಾರಿಹಾಳ ವೃದ್ಧೆ ರಕ್ಷಿಸಿದ ಯುವಕ ಎಂಬುದು ತಿಳಿದು ಬಂದಿದೆ.

ಯುವಕನ ಸಾಹಸಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನದಿ ಹಾರಿ ನೀರು ಕುಡಿದ ವೃದ್ಧೆ ಅಸ್ವಸ್ಥಗೊಂಡಿದ್ದಾರೆ. ವೃದ್ಧೆಗೆ ಸ್ಥಳೀಯ ‌ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನ ಚಿಕಿತ್ಸೆಗೆ ಬೆಳಗಾವಿ ಜಿಲ್ಲಾಸ್ಪತ್ರೆಗೆ ಸ್ಥಳಾಂತರ ‌ಮಾಡಲಾಗಿದೆ. ವೃದ್ಧೆಯ ಆತ್ಮಹತ್ಯೆ ಯತ್ನಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಖಾನಾಪುರ ಪೊಲೀಸ್ ‌ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಓದಿ:ಆಸ್ಪತ್ರೆಯಲ್ಲಿ ಔಷಧ ವಿಚಾರಕ್ಕೆ ಗಲಾಟೆ: ಪೊಲೀಸರು, ಸಿಬ್ಬಂದಿ ಮೇಲೆ ಮಾರಣಾಂತಿಕ ಹಲ್ಲೆ

ABOUT THE AUTHOR

...view details