ಕರ್ನಾಟಕ

karnataka

ETV Bharat / state

ಹಳೇ ದ್ವೇಷ: ಪಕ್ಕದ ಮನೆಯವರಿಂದಲೇ ಯುವಕನ ಬರ್ಬರ ಹತ್ಯೆ - ಬೆಳಗಾವಿಯಲ್ಲಿ ಯುವಕನ ಬರ್ಬರ ಕೊಲೆ

ಹಿಡಕಲ್‌ ಡ್ಯಾಮ್‌ನಲ್ಲಿ ಅಂಗಡಿ ಇಟ್ಟುಕೊಂಡಿದ್ದ ವ್ಯಕ್ತಿಯೊಬ್ಬನನ್ನು ಅಕ್ಕ-ಪಕ್ಕದ ಮನೆಯವರೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.

Young man murder in Hidkal Dam
Young man murder in Hidkal Dam

By

Published : Jul 16, 2022, 6:21 PM IST

ಬೆಳಗಾವಿ:ಹುಕ್ಕೇರಿ ತಾಲೂಕಿನ ಹಿಡಕಲ್‌ ಡ್ಯಾಮ್‌ನಲ್ಲಿ ಇಂದು ವ್ಯಕ್ತಿಯೊಬ್ಬರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಡ್ಯಾಮ್‌ನಲ್ಲಿ ದಿನಸಿ ಅಂಗಡಿ ಇಟ್ಟುಕೊಂಡಿದ್ದ ಪರಶುರಾಮ ಹಲಕರ್ಣಿ (32) ಕೊಲೆಯಾದವರು. ಗ್ರಾಮದ ಆಂಜನೇಯ ಮಂದಿರದ ಹತ್ತಿರ ಮಾರಕಾಸ್ತ್ರಗಳಿಂದ ದಾಳಿ ಮಾಡಿದ ಮೂವರು ದುಷ್ಕರ್ಮಿಗಳು, ಕೊಚ್ಚಿ ಕೊಲೆ ಮಾಡಿದ್ದಾರೆ.

ಕೊಲೆ ನಡೆದ ಕೆಲವು ಗಂಟೆಗಳ ನಂತರ ಆರೋಪಿ ಬಸವರಾಜ ಗಲಾಟೆ (30) ಎನ್ನುವವರನ್ನು ಪೊಲೀಸರು ಬಂಧಿಸಿದ್ದಾರೆ. ಇದಾದ ಕೆಲ ಹೊತ್ತಿನಲ್ಲೇ ಇನ್ನಿಬ್ಬರು ಆರೋಪಿಗಳಾದ ಮಂಜು ಪುಟಜಾನೆ (24) ಹಾಗೂ ಕೆಂಪಣ್ಣ ನೇಸರಗಿ (30) ತಾವಾಗಿಯೇ ಪೊಲೀಸರ ಮುಂದೆ ಶರಣಾಗಿದ್ದಾರೆ.

ಕೊಲೆಯಾದ ವ್ಯಕ್ತಿ ಹಾಗೂ ಆರೋಪಿಗಳು ಅಕ್ಕ-ಪಕ್ಕದ ಮನೆಯವರೇ ಆಗಿದ್ದಾರೆ. ಹಳೆಯ ವೈಷಮ್ಯವೇ ಕೊಲೆಗೆ ಕಾರಣವೆಂದು ಮೇಲ್ನೋಟಕ್ಕೆ ತಿಳಿದುಬಂದಿದೆ. ಆದರೆ, ಈ ಮೂವರ ಮಧ್ಯೆ ಹೇಗೆ ಸಂಪರ್ಕವಿತ್ತು. ಕೊಲೆಗೆ ನಿಖರ ಕಾರಣ ಏನೆಂದು ವಿಚಾರಣೆ ಬಳಿಕ ತಿಳಿಯಲಿದೆ ಎಂದು ಎಸ್ಪಿ ಡಾ. ಸಂಜೀವ್ ಪಾಟೀಲ್​​ ತಿಳಿಸಿದ್ದಾರೆ.

ಯಮಕನಮರಡಿ ಇನ್‌ಸ್ಪೆಕ್ಟರ್ ರಮೇಶ ಛಾಯಾಗೋಳ, ಪಿಎಸ್ಐ ಬಿ.ವಿ.ನ್ಯಾಮಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ABOUT THE AUTHOR

...view details