ಕರ್ನಾಟಕ

karnataka

ETV Bharat / state

ಬೆಳಗಾವಿಯಲ್ಲಿ ಬೃಹತ್ ಮರ ಬಿದ್ದು ಯುವಕ ಸಾವು.. ತಕ್ಷಣವೇ ಐದು ಲಕ್ಷ ಪರಿಹಾರ ಬಿಡುಗಡೆ - ಈಟಿವಿ ಭಾರತ್​ ಕರ್ನಾಟಕ

ಮಂಗಳವಾರ ಬೆಳಗಾವಿಯಲ್ಲಿ ಮರ ಬಿದ್ದು ಮೃತಪಟ್ಟ ಯುವಕನ ಕುಟುಂಬಕ್ಕೆ ಒಂದೇ ದಿನದಲ್ಲಿ ಪರಿಹಾರ ಧನ ನೀಡಲಾಗಿದೆ. ಜಿಲ್ಲಾಧಿಕಾರಿ ನಿತೇಶ್​ ಪಾಟೀಲ್​ ತ್ವರಿತಗತಿಯಲ್ಲಿ ಪರಿಹಾರ ನೀಡಿದ್ದಾರೆ. ಮೃತ ಯುವಕನ ತಾಯಿಯ ಖಾತೆಗೆ ಐದು ಲಕ್ಷ ಪರಿಹಾರ ಹಣವನ್ನು ವರ್ಗಾಯಿಸಿದ್ದಾರೆ.

-compensation-released-immediate
ತಕ್ಷಣವೇ ಐದು ಲಕ್ಷ ಪರಿಹಾರ ಬಿಡುಗಡೆ

By

Published : Sep 14, 2022, 9:08 AM IST

ಬೆಳಗಾವಿ:ನಗರದ ಆರ್​ಟಿಓ ವೃತ್ತದ ಸಮೀಪ ಬೃಹತ್ ಮರ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದ ಯುವಕನ ವಾರಸುದಾರರಿಗೆ ತಕ್ಷಣವೇ ಐದು ಲಕ್ಷ ರೂಪಾಯಿ ಪರಿಹಾರ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ. ಬೆಳಗಾವಿ ತಾಲ್ಲೂಕು ತುಮ್ಮರಗುದ್ದಿ ಗ್ರಾಮದ ಸಿದ್ದನಹಳ್ಳಿ ಮಜರೆ ನಿವಾಸಿ ರಾಕೇಶ್ ಲಗಮಪ್ಪ ಸುಲಧಾಳ(27) ಮೃತ ಯುವಕ.

ಯುವಕ ಮಂಗಳವಾರ ಮಧ್ಯಾಹ್ನ ಬೆಳಗಾವಿ ನಗರದ ಆರ್.ಟಿ.ಓ ವೃತ್ತದ ಮರಾಠ ಮಂಡಳ ಶಾಲೆಯ ಬಳಿ ಬೈಕ್ ಮೇಲೆ ತೆರಳುತ್ತಿರುವಾಗ ಮಳೆ-ಗಾಳಿಯಿಂದ ಬೃಹತ್ ಮರ ಬಿದ್ದು ಮೃತಪಟ್ಟಿದ್ದಾನೆ. ಈ ಕುರಿತು ಬೀಮ್ಸ್​ನಿಂದ ಮರಣೋತ್ತರ ವರದಿ ಪಡೆದುಕೊಂಡ ತಕ್ಷಣವೇ ಮೃತ ಯವಕನ ತಾಯಿ ಹಾಲವ್ವ ಲಗಮಪ್ಪ ಸುಲಧಾಳ ಅವರ ಖಾತೆಗೆ ಐದು ಲಕ್ಷ ರೂಪಾಯಿ ಪರಿಹಾರ ಧನವನ್ನು ಜಿಲ್ಲಾಧಿಕಾರಿ ಬಿಡುಗಡೆ ಮಾಡಿದ್ದಾರೆ.

ಇದನ್ನೂ ಓದಿ :ಬೆಳಗಾವಿಯಲ್ಲಿ ಮಳೆ ಅವಾಂತರ.. ಚಲಿಸುತ್ತಿದ್ದ ಬೈಕ್​ಗಳ ಮೇಲೆ ಬಿದ್ದ ಮರ, ಓರ್ವ ಸಾವು

ABOUT THE AUTHOR

...view details