ಕರ್ನಾಟಕ

karnataka

ETV Bharat / state

ನೆರೆ/ಬರದಿಂದ ತತ್ತರಿಸುವ ಪ್ರದೇಶದಲ್ಲಿ ಡ್ರ್ಯಾಗನ್ ಫ್ರೂಟ್​ ಬೆಳೆದು ಯಶಸ್ಸು ಕಂಡ ಪದವೀಧರ - Chikodi young farmer Dragon Fruit is a grew up news

38 ವರ್ಷದ ಪದವೀಧರ ಯಾವುದೇ ನೌಕರಿ ಅರಸಿಕೊಂಡು ಹೋಗದೇ ಆಧುನಿಕ ಕೃಷಿ ಪದ್ಧತಿಯಲ್ಲಿ ಯಶಸ್ಸು ಕಂಡಿದ್ದಾನೆ. ಈ ಭಾಗದ ಜನರು ಕಾಣದೇ ಇರುವಂತ ಅಪರೂಪದ ಡ್ರ್ಯಾಗನ್ ಹಣ್ಣನ್ನು ಬೆಳೆದು ಗಮನ ಸೆಳೆದಿದ್ದಾರೆ.

ಡ್ರ್ಯಾಗನ್ ಫ್ರೂಟ್​ ಬೆಳೆದು ಯಶಸ್ಸು ಕಂಡ ಪದವೀಧರ
ಡ್ರ್ಯಾಗನ್ ಫ್ರೂಟ್​ ಬೆಳೆದು ಯಶಸ್ಸು ಕಂಡ ಪದವೀಧರ

By

Published : Jul 28, 2020, 1:19 PM IST

ಚಿಕ್ಕೋಡಿ: ಕೊರೊನಾ ಮಹಾಮಾರಿಯಿಂದ ಅದೆಷ್ಟೋ ಜನ ಬೀದಿಗೆ ಬಿದ್ದಿದ್ದನ್ನು ನೋಡಿದ್ದೇವೆ, ಕೇಳಿದ್ದೇವೆ. ಈ ಕೊರೊನಾ ಕರಿ ನೆರಳಿನಿಂದ ಅದೆಷ್ಟೋ ರೈತರು ತಮ್ಮ ಬೆಳೆಗಳಿಗೆ ಸರಿಯಾದ ಮಾರುಕಟ್ಟೆ ಸಿಗದೆ ತಮ್ಮ ಬೆಳೆಗಳನ್ನು ಬೀದಿಗೆ ಬಿಸಾಕಿದ್ದಾರೆ. ಅದೆಷ್ಟೋ ರೈತರು ಸಾಲದ ಸುಳಿಗೆ ಸಿಲುಕಿದ್ದಾರೆ. ಆದರೆ, ಇಲ್ಲೊಬ್ಬ ಪದವೀಧರ ರೈತ ಮಾತ್ರ ಹೊರ ದೇಶದ ಹಣ್ಣನ್ನು ಬೆಳೆದು ಯಶಸ್ಸು ಕಂಡಿದ್ದಾರೆ.

ಹೌದು.., ಕಾಗವಾಡ ಗ್ರಾಮದ ಮಹಾದೇವ ಕೋಳೆಕರ ಎಂಬ 38 ವರ್ಷದ ಪದವೀಧರ. ಯಾವುದೇ ನೌಕರಿ ಆಸೆ ಪಡದೆ ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಂಡು ಅಪರೂಪದ ಡ್ರ್ಯಾಗನ್ ಹಣ್ಣನ್ನು ಬೆಳೆದು ಇಂದು ಯಶಸ್ಸು ಕಂಡಿದ್ದಾರೆ.

ಡ್ರ್ಯಾಗನ್ ಫ್ರೂಟ್​ ಬೆಳೆದು ಯಶಸ್ಸು ಕಂಡ ಪದವೀಧರ

ಈ ಹಣ್ಣನ್ನು ಸಕ್ಕರೆ ಖಾಯಿಲೆ, ಡೆಂಗ್ಯೂ, ಬಿಳಿ ರಕ್ತಕಣ ಕಡಿಮೆ ಆದವರು ಹೆಚ್ಚಾಗಿ ಈ ಹಣ್ಣನ್ನು ತಿನ್ನುತ್ತಾರೆ. ಈ ಡ್ರ್ಯಾಗನ್ ಹಣ್ಣು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿಯಾಗಿದೆ. ಕೊರೊನಾ ಸೋಂಕಿತರಿಗೆ ಇದೊಂದು ಶಕ್ತಿವರ್ಧಕ ಹಣ್ಣಾಗಿದ್ದು, ಪ್ರತಿದಿನ ಮಹಾದೇವ ಕೋಳೆಕರ ಅವರ ತೋಟಕ್ಕೆ ಬಂದು ಒಬ್ಬೊಬ್ಬರೂ ಐದರಿಂದ ಆರು ಕೆ‌‌.ಜಿ ಹಣ್ಣು ಖರೀದಿಸುತ್ತಾರೆ. ಹೀಗಾಗಿ ನಮ್ಮ ತೋಟದಲ್ಲಿಯೇ ದಿನಕ್ಕೆ 100 ರಿಂದ 120 ಕೆ.ಜಿ ಹಣ್ಣು ಮಾರಾಟವಾಗುತ್ತವೆ. ಇದು ತಿನ್ನಲು ತುಂಬಾ ಸುಲಭವಾಗಿದ್ದು, ಹೇಗೆ ತಿನ್ನಬೇಕು ಎಂಬುದನ್ನು ಸಹ ಮಹಾದೇವ ಕೋಳೆಕರ ಅವರು ಜನರಿಗೆ ತಿಳಿಸಿಕೊಟ್ಟಿದ್ದಾರೆ.

ಈ ಡ್ರ್ಯಾಗನ್ ಹಣ್ಣನ್ನು ಮೊದಲು ಶ್ರೀಲಂಕಾ, ಥೈಲ್ಯಾಂಡ್, ವಿಯಟ್ನಾಂ ದೇಶಗಳಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತಿದೆ. ಈಗ ಕಾಗವಾಡ ರೈತ ಬೆಳೆದಿದ್ದು, ಗ್ರಾಮೀಣ ಭಾಗದ ಜನರಿಗೂ ಈ ಹಣ್ಣಿನ ರುಚಿ ಸವಿಯುವ ಅವಕಾಶ ಸಿಕ್ಕಿದೆ. ಒಂದು ಎಕರೆ ಜಮೀನಿನಲ್ಲಿ ಈ ಡ್ರ್ಯಾಗನ್ ಹಣ್ಣು ಬೆಳೆದಿದ್ದು, 500 ಸಿಮೆಂಟ್​ ಕಂಬಗಳಿದ್ದು, ಪ್ರತಿ ಕಂಬಕ್ಕೆ ನಾಲ್ಕರಂತೆ ಸಸಿಗಳನ್ನು ದಕ್ಷಿಣೋತ್ತರವಾಗಿ ನಾಟಿ ಮಾಡಿದ್ದಾರೆ.

ಈ ಲಾಕ್ ಡೌನ್ ಕ್ಕೂ ಮುಂಚೆ ಪಕ್ಕದ ಮಹಾರಾಷ್ಟ್ರದ ಸಾಂಗ್ಲಿ, ಕೊಲ್ಲಾಪುರ, ಇಂಚಲಕರಂಜಿ ಮಾರುಕಟ್ಟೆಗಳಿಗೆ ಡ್ರ್ಯಾಗನ್ ಹಣ್ಣನ್ನು ಕಳಿಸುತ್ತಿದ್ದರು. ಆದರೆ, ಈಗ ಮಹಾರಾಷ್ಟ್ರದಲ್ಲಿ ಕೊರೊನಾ ಸಂಖ್ಯೆ ಹೆಚ್ಚಾಗುತ್ತಿದ್ದು, ಕರ್ನಾಟಕ ಗಡಿಯಲ್ಲಿ ಮಹಾರಾಷ್ಟ್ರಕ್ಕೆ ಪ್ರವೇಶ ನಿರ್ಬಂಧ ಇರುವುದರಿಂದ ಮಹದೇವ ಅವರು ಈಗ ಬೆಳಗಾವಿ ಮಾರುಕಟ್ಟೆಗೆ ಕಳಿಸುತ್ತಿದ್ದಾರೆ. ಈಗಿನ ಯುವ ರೈತರು ಒಂದೇ ಬೆಳೆ ಮಾಡುತ್ತಿರುವುದರಿಂದ ನಷ್ಟವಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಅದಕ್ಕೆ ಬಹು ಬೆಳೆಯ ಪದ್ಧತಿಯನ್ನು ಅನುಸರಿಸಿ ಎಂದು ಯುವ ರೈತ ಸಲಹೆ ನೀಡಿದರು.

ಒಟ್ಟಾರೆಯಾಗಿ ಚಿಕ್ಕೋಡಿ ಉಪವಿಭಾಗದಲ್ಲಿ ಈ ಡ್ರ್ಯಾಗನ್ ಹಣ್ಣು ಸಿಗುವುದು ವಿರಳವಾಗಿದ್ದು ಯುವ ಪದವಿ ರೈತ ಕಳೆದ ನಾಲ್ಕು ವರ್ಷಗಳ ಹಿಂದೆ ಕಷ್ಟಪಟ್ಟು ಬೆಳೆದಿದ್ದಾರೆ. ಈ ಡ್ರ್ಯಾಗನ್ ಹಣ್ಣು ಬೆಳೆಯುವ ಆಸಕ್ತಿ ಹೊಂದಿದ್ದರೆ, ಸಲಹೆ ನೀಡಲು ಸಿದ್ಧ ಅಂತಾರೆ ಮಹದೇವ. ಆಸಕ್ತ ರೈತರು ಮಹದೇವ ಅವರನ್ನು ಸಂಪರ್ಕಿಸಲು -9343828061 ಸಂಖ್ಯೆ ಕರೆ ಮಾಡಬಹುದು.

ABOUT THE AUTHOR

...view details