ಬೆಳಗಾವಿ:ಸಾಲಬಾಧೆ ತಾಳಲಾರದೇ ಯುವ ರೈತನೊಬ್ಬ ತನ್ನ ಒಂದು ವರ್ಷದ ಮಗನ ಜನ್ಮದಿನ ಆಚರಿಸಿದ ಮರುದಿನವೇ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿನ ವಿನಾಯಕ ನಗರದಲ್ಲಿ ನಡೆದಿದೆ.
ಮೂಲತಃ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹೊಸೂರ ಗ್ರಾಮದ ಯುವ ರೈತ ರಾಜಶೇಖರ ಬೋಳೆತ್ತಿನ (34) ಮೃತ ರೈತ. ಮೃತಪಟ್ಟ ರೈತ ಕೃಷಿ ಚುಟುವಟಿಕೆಗಳಿಗೆ ಮಾಡಿಕೊಂಡು ಸಾಲ ತಿರಿಸಲಾಗದೇ ಮನೆಯಲ್ಲಿ ಮಗುವನ್ನು ತೂಗಲು ಕಟ್ಟಿದ್ದ ಜೋಳಿಗೆಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗ್ರಾಮದಲ್ಲಿ ತನ್ನ ತಂದೆಯ ಹೆಸರಿನಲಿದ್ದ ಜಮೀನಿನಲ್ಲಿ ಕೃಷಿ ಮಾಡಿಕೊಂಡಿದ್ದರು. ಆದರೆ ಕಳೆದ ಎರಡು ವರ್ಷಗಳಿಂದ ಅತಿವೃಷ್ಟಿಯಿಂದ ಜಮೀನಲ್ಲಿ ಬೆಳೆದ ಸೋಯಾಬಿನ್ ಬೆಳೆ ಹಾಳಾಗಿದ್ದು, ರೈತ ಬೆಳೆದ ಬೆಳೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿತ್ತು. ಇತ್ತ ತಂದೆಯ ಹೆಸರಿನಲ್ಲಿ ಕೈಗಡ ಸಾಲ, ಬ್ಯಾಂಕ್ ಸೇರಿದಂತೆ ತಾನು ಮಾಡಿಕೊಂಡ ಸಾಲದಿಂದಾಗಿ ಜಮೀನನ್ನು ಬೇರೆಯವರಿಗೆ ಗಿರವಿ ಇಟ್ಟಿದ್ದನಂತೆ. ಇದಲ್ಲದೇ ಜೀವನ ನಿರ್ವಹಣೆಗೆ ಲಕ್ಷಾಂತರ ರೂ. ಸಾಲ ಮಾಡಿಕೊಂಡಿದ್ದ ಎನ್ನಲಾಗಿದೆ.
ನಿನ್ನೆ ತನ್ನ ಮಗನ ಪ್ರಥಮ ವರ್ಷದ ಹುಟ್ಟುಹಬ್ಬ ಆಚರಿಸಿ, ಹೆಂಡತಿ ಮಕ್ಕಳನ್ನು ಸ್ವಗ್ರಾಮಕ್ಕೆ ಕಳುಹಿಸಿದ್ದ ರಾಜಶೇಖರ ಬಳಿಕ ನೇಣಿಗೆ ಶರಣಾಗಿದ್ದಾರೆ. ಈ ಕುರಿತು ಬೆಳಗಾವಿ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಪ್ರೇಯಸಿ ಜೊತೆ ಗಂಡ ಎಂಜಾಯ್: ತವರು ಮನೆಯಲ್ಲಿ ಹೆಂಡತಿ ಆತ್ಮಹತ್ಯೆ