ಅಥಣಿ : ಬಿಜೆಪಿ ಸರ್ಕಾರದಲ್ಲಿ ಮೂರು ಪಕ್ಷದ ಶಾಸಕರು ಇದ್ದಾರೆ ಎಂದು ಸಚಿವ ಯೋಗೇಶ್ವರ್ ಹೇಳಿಕೆ ನೀಡಿರುವುದು ನನಗೂ ಅರ್ಥವಾಗುತ್ತಿಲ್ಲ ಎಂದು ಡಿಸಿಎಂ ಲಕ್ಷ್ಮಣ್ ಸವದಿ ಪ್ರತಿಕ್ರಿಯಿಸಿದ್ದಾರೆ.
ಬಿಜೆಪಿ ಸರ್ಕಾರದಲ್ಲಿ ಮೂರು ಪಕ್ಷದ ಶಾಸಕರು ಇದ್ದಾರೆ ಎಂದು ಸಚಿವ ಯೋಗೇಶ್ವರ್ ಸಚಿವ ಸಂಪುಟ ಸಭೆ ಮುಗಿದ ಬಳಿಕ ಹೇಳಿಕೆ ನೀಡಿದ್ದು, ಸದ್ಯ ಪ್ರವಾಸೋದ್ಯಮ ಸಚಿವ ಯೋಗೇಶ್ವರ್ ಹೇಳಿಕೆಗೆ ಡಿಸಿಎಂ ಲಕ್ಷ್ಮಣ್ ಸವದಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಡಿಸಿಎಂ ಲಕ್ಷ್ಮಣ ಸವದಿ ಮಾತನಾಡಿದರು.. ಇವರ ಹೇಳಿಕೆ ಅಷ್ಟೊಂದು ಸಮಂಜಸ ಅಲ್ಲ. ನಾಲ್ಕು ಗೋಡೆಯಲ್ಲಿ ಕುಳಿತು ಮಾತನಾಡಬೇಕೇ ಹೊರತು ಈ ರೀತಿ ಹೇಳಿಕೆ ಯಾಕೆ ಎಂದು ನನಗೂ ಅರ್ಥ ಆಗುತ್ತಿಲ್ಲ.
ತಾಂತ್ರಿಕ ವಿಚಾರವನ್ನು ಬಹಿರಂಗವಾಗಿ ವ್ಯಕ್ತಪಡಿಸುವುದು ಸರಿಯಲ್ಲ ಎಂದು ಸಚಿವ ಯೋಗೇಶ್ವರ್‌ಗೆ ಡಿಸಿಎಂ ಸವದಿ ಕಿವಿ ಮಾತು ಹೇಳಿದರು.
ರಾಜ್ಯದಲ್ಲಿ ಕೊರೊನಾ ಅಬ್ಬರದಿಂದಾಗಿ ಜನಪ್ರತಿನಿಧಿಗಳು ಕ್ಷೇತ್ರದ ಜನರ ಕಡೆ ಹೆಚ್ಚಿನ ಗಮನ ಕೊಡಬೇಕು. ಆದರೆ, ಅನಗತ್ಯ ವಿಚಾರ ಮಾತನಾಡಬಾರದೆಂದು ಹೇಳಿದರು.
ಎಲ್ಲಾ ಸರ್ಕಾರಗಳಲ್ಲಿ ಹಾಗೂ ಒಂದೇ ಕುಟುಂಬದ ಮನೆಯಲ್ಲೂ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಇರುತ್ತವೆ. ಸರ್ಕಾರ ಅಂದ ಮೇಲೆ ಅದು ಸಹಜ.
ಪಕ್ಷದ ರಾಜ್ಯಾಧ್ಯಕ್ಷರು, ಮುಖ್ಯಮಂತ್ರಿ ಹಾಗೂ ರಾಷ್ಟ್ರೀಯ ವರಿಷ್ಠರು ಗಮನಿಸಿದ್ದಾರೆ. ಮುಂದೆ ಎಲ್ಲವೂ ಸರಿ ಹೋಗುತ್ತದೆ ಎಂದು ತಿಳಿಸಿದರು.
ಓದಿ:ಲಾಕ್ಡೌನ್ ರೂಲ್ಸ್ : ಸೈಕಲ್ ಸಮೇತ ನಡೆದುಕೊಂಡು ಆಸ್ಪತ್ರೆಗೆ ಬಂದ ವೃದ್ಧ ತಂದೆ- ಮಗಳು..!