ಚಿಕ್ಕೋಡಿ : ಋಷಿ ಸಂಸ್ಕ್ರತಿ ವಿದ್ಯಾಕೇಂದ್ರ ಹಾಗೂ ನಿಪ್ಪಾಣಿ ನಗರ ಪಾಲಿಕೆ ವತಿಯಿಂದ ಪೌರ ಕಾರ್ಮಿಕರಿಗಾಗಿ ಸಿದ್ದಿ ಸಮಾಧಿ ಯೋಗಾಸನ ತರಬೇತಿ ಕಾರ್ಯಕ್ರಮ ನಡೆಯಿತು.
ನಿಪ್ಪಾಣಿ ನಗರಪಾಲಿಕೆ ಪೌರ ಕಾರ್ಮಿಕರಿಗೆ ಯೋಗ ತರಬೇತಿ - ಬೆಳಗಾವಿಯ ನಿಪ್ಪಾಣಿ ನಗರ ಪಾಲಿಕೆ ಪೌರ ಕಾರ್ಮಿಕರಿಗೆ ಯೋಗ ತರಬೇತಿ
ಋಷಿ ಸಂಸ್ಕ್ರತಿ ವಿದ್ಯಾಕೇಂದ್ರ ಹಾಗೂ ನಿಪ್ಪಾಣಿ ನಗರ ಪಾಲಿಕೆ ವತಿಯಿಂದ ಪೌರ ಕಾರ್ಮಿಕರಿಗಾಗಿ ಸಿದ್ದಿ ಸಮಾಧಿ ಯೋಗಾಸನ ತರಬೇತಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ನಗರಪಾಲಿಕೆಯ ಪೌರ ಕಾರ್ಮಿಕರಿಗೆ ಯೋಗಾಸನ, ಜ್ಞಾನಯೋಗ, ನೈತಿಕ ಮೌಲ್ಯ, ಆತ್ಮಶುದ್ದಿ ಹಾಗೂ ದೈಹಿಕ, ಮಾನಸಿಕ ಆರೋಗ್ಯ, ಆಧ್ಯಾತ್ಮಿಕ ವಿಕಾಸ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಮಾಹಿತಿ ನೀಡಲಾಯಿತು.
ಈ ವೇಳೆ ನಗರ ಪಾಲಿಕೆ ಪೌರಾಯುಕ್ತ ಮಹಾವೀರ ಬೋರಣ್ಣ ಮಾತನಾಡಿ, ಪೌರ ಕಾರ್ಮಿಕರು ತಮ್ಮ ಇಡೀ ಜೀವನವನ್ನು ನಗರದ ನೈರ್ಮಲ್ಯ ಕಾಪಾಡಲು ಮುಡಿಪಾಗಿಟ್ಟು ಜನರನ್ನು ರೋಗ ರುಜಿನಗಳಿಂದ ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ಆದ್ದರಿಂದ ಅವರ ಆರೋಗ್ಯ ಕಾಪಾಡಿಕೊಳ್ಳಲು ವಿಶ್ವಪ್ರಸಿದ್ದ ಯೋಗ ಶಿಕ್ಷಣವನ್ನು ನೀಡಲಾಗುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಎಲ್ಲಾ ಪೌರ ಕಾರ್ಮಿಕರನ್ನು ಶಾಲು ಹೊದಿಸಿ ಗೌರವಿಸಲಾಯಿತು.