ಕರ್ನಾಟಕ

karnataka

ETV Bharat / state

ಅಂತಾರಾಷ್ಟ್ರೀಯ ಯೋಗ ದಿನ.. ಅವತ್ತು ಬೆಳಗಾವಿಯಲ್ಲಿ ದೃಷ್ಟಿಹೀನ ಮಕ್ಕಳಿಂದ ಜಲಯೋಗ ಪ್ರದರ್ಶನ - ಬೆಳಗಾವಿ

ಅಂತಾರಾಷ್ಟ್ರೀಯ ಯೋಗ ದಿನ ವಿಶಿಷ್ಟವಾಗಿ ಆಚರಿಸಬೇಕು ಎಂಬ ಉದ್ದೇಶದಿಂದ ಜಿಲ್ಲಾಡಳಿತ ಹಾಗೂ ಈಜುಗಾರರ ಕ್ಲಬ್ ವತಿಯಿಂದ ಜಲಯೋಗ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಜೂನ್ 21 ರಂದು ಸಂಜೆ ಕೆಎಲ್‍ಇ ಸಂಸ್ಥೆಯ ಈಜುಕೊಳದಲ್ಲಿ ಈಜು ತರಬೇತುದಾರಾದ ಉಮೇಶ ಕಲಘಟಗಿ ನೇತೃತ್ವದಲ್ಲಿ 40 ಜನರ ತಂಡ ಜಲಯೋಗ ಪ್ರದರ್ಶನ ನೀಡಲಿದೆ ಎಂದು ಜಿಲ್ಲಾಧಿಕಾರಿ ಡಾ. ಎಸ್ ಬಿ ಬೊಮ್ಮನಹಳ್ಳಿ ತಿಳಿಸಿದರು.

ಯೋಗ ದಿನಾಚರಣೆ ಹಿನ್ನೆಲೆ ಬೆಳಗಾವಿ ಡಿಸಿಯಿಂದ ಅಧಿಕಾರಿಗಳ ಸಭೆ

By

Published : Jun 17, 2019, 8:32 PM IST

ಬೆಳಗಾವಿ:ಜಿಲ್ಲಾಡಳಿತದ ವತಿಯಿಂದ ಜೂನ್ 21 ರಂದು ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಗುತ್ತಿದ್ದು, ಜಲಯೋಗ ಈ ಸಲದ ಆಕರ್ಷಣೆಯಾಗಿದೆ ಎಂದು ಬೆಳಗಾವಿ ಡಿಸಿ ಡಾ. ಎಸ್ ಬಿ ಬೊಮ್ಮನಹಳ್ಳಿ ಮಾಹಿತಿ ನೀಡಿದರು.

ವಿಶ್ವ ಯೋಗ ದಿನಾಚರಣೆ ಕುರಿತು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಅಂತಾರಾಷ್ಟ್ರೀಯ ಯೋಗ ದಿನ ವಿಶಿಷ್ಟವಾಗಿ ಆಚರಿಸಬೇಕು ಎಂಬ ಉದ್ದೇಶದಿಂದ ಜಿಲ್ಲಾಡಳಿತ ಹಾಗೂ ಈಜುಗಾರರ ಕ್ಲಬ್ ವತಿಯಿಂದ ಜಲಯೋಗ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಜೂನ್ 21 ರಂದು ಸಂಜೆ ಕೆಎಲ್‍ಇ ಸಂಸ್ಥೆಯ ಈಜುಕೊಳದಲ್ಲಿ ಈಜು ತರಬೇತುದಾರ ಉಮೇಶ ಕಲಘಟಗಿ ನೇತೃತ್ವದಲ್ಲಿ 40 ಜನರ ತಂಡ ಜಲಯೋಗ ಪ್ರದರ್ಶನ ನೀಡಲಿದೆ. ಈ ತಂಡದಲ್ಲಿ ವಿಶೇಷ ಚೇತನ ಅಂದರೆ ಕಿವುಡ- ಮೂಗ, ದೃಷ್ಟಿಹೀನ ಮಕ್ಕಳು ಇರುವುದು ಗಮನಾರ್ಹ ಎಂದರು.

ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ಜೂನ್ 21 ರಂದು ಬೆಳಿಗ್ಗೆ 7 ರಿಂದ 8 ಗಂಟೆಯವರೆಗೆ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಒಂದು ಗಂಟೆಯ ಈ ಕಾರ್ಯಕ್ರಮದಲ್ಲಿ ಪ್ರಾರ್ಥನೆ, ವಿವಿಧ ಬಗೆಯ ಆಸನಗಳ ಪ್ರದರ್ಶನ, ಪ್ರಾಣಾಯಾಮ, ಧ್ಯಾನ ನಡೆಯಲಿದೆ ಎಂದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕೀರ್ತಿ ಹೆಚ್ಚಿಸಲು ಸಹಕಾರಿಯಾಗಿರುವ ಪಾರಂಪರಿಕ ಯೋಗ ಪದ್ಧತಿಯನ್ನು ಆರೋಗ್ಯದ ದೃಷ್ಟಿಯಿಂದ ಇನ್ನೂ ಹೆಚ್ಚು ಪ್ರಸಿದ್ದಿಗೊಳಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ABOUT THE AUTHOR

...view details