ಬೆಳಗಾವಿ: ನಷ್ಟದ ಸುಳಿಯಲ್ಲಿರುವ ಯೆಸ್ ಬ್ಯಾಂಕ್ನ್ನು ಆರ್ಬಿಐ ಸೂಪರ್ ಸೀಡ್ ಮಾಡಿರುವ ಹಿನ್ನೆಲೆ ನಗರದಲ್ಲಿ ಯಸ್ ಬ್ಯಾಂಕ್ ಗ್ರಾಹಕರು ಆತಂಕಕ್ಕೀಡಾಗಿದ್ದಾರೆ.
ಯೆಸ್ ಬ್ಯಾಂಕ್ ದಿವಾಳಿ : ಆತಂಕದಲ್ಲಿ ಕುಂದಾನಗರಿ ಗ್ರಾಹಕರು - ನಷ್ಟದ ಸುಳಿಯಲ್ಲಿರುವ ಯಸ್ ಬ್ಯಾಂಕ್
ನಷ್ಟದ ಸುಳಿಯಲ್ಲಿರುವ ಯೆಸ್ ಬ್ಯಾಂಕ್ ಅನ್ನು ಆರ್ಬಿಐ ಸೂಪರ್ ಸೀಡ್ ಮಾಡಿರುವ ಹಿನ್ನೆಲೆ ನಗರದಲ್ಲಿ ಯೆಸ್ ಬ್ಯಾಂಕ್ ಗ್ರಾಹಕರು ಆತಂಕಕ್ಕೀಡಾಗಿದ್ದರು.
![ಯೆಸ್ ಬ್ಯಾಂಕ್ ದಿವಾಳಿ : ಆತಂಕದಲ್ಲಿ ಕುಂದಾನಗರಿ ಗ್ರಾಹಕರು Yes Bank Consumers fear in Belagavi](https://etvbharatimages.akamaized.net/etvbharat/prod-images/768-512-6324136-thumbnail-3x2-yes.jpg)
ಆತಂಕದಲ್ಲಿ ಕುಂದಾನಗರಿ ಗ್ರಾಹಕರು
ಯೆಸ್ ಬ್ಯಾಂಕ್ ನತ್ತ ಆಗಮಿಸಿದ ಗ್ರಾಹಕರು, ಈ ಕುರಿತು ಮಾಹಿತಿ ಪಡೆದರು. ನಗರದ ಕ್ಲಬ್ ರಸ್ತೆಯಲ್ಲಿರುವ ಯೆಸ್ ಬ್ಯಾಂಕ್ ಶಾಖೆಗೆ ನೋಟಿಸ್ ಅಂಟಿಸಲಾಗಿದೆ. ಇದಲ್ಲದೇ ಯೆಸ್ ಬ್ಯಾಂಕ್ ಎಟಿಎಂಗೆ ನೋ ಸರ್ವೀಸ್ ಬೋರ್ಡ್ ಹಾಕಲಾಗಿದೆ.
ಆತಂಕದಲ್ಲಿ ಕುಂದಾನಗರಿ ಗ್ರಾಹಕರು
ಬ್ಯಾಂಕ್ನ ಆರ್ಥಿಕ ಸ್ಥಿತಿ ಸಾಕಷ್ಟು ಕುಸಿದಿರೋದ್ರಿಂದ ಗ್ರಾಹಕರ ಹಣ ವಾಪಸಾತಿ ಮೇಲೆ ನಿರ್ಬಂಧ ವಿಧಿಸಲಾಗಿದ್ದು, ಅಕೌಂಟ್ಗೆ 50 ಸಾವಿರ ರೂ. ಮಾತ್ರ ಹಣ ವಾಪಸ್ ಪಡೆಯಬಹುದಾಗಿದೆ. ಈ ಹಿನ್ನೆಲೆಯಲ್ಲಿ ಜನ 50 ಸಾವಿರ ರೂಗಳನ್ನಾದರೂ ವಾಪಸ್ ಪಡೆದರಾಯಿತು ಎಂದು ಬ್ಯಾಂಕ್ ಬಳಿ ಜಮಾಯಿಸಿದ್ದರು. ಇನ್ನು ಕೆಲವರು ಎಟಿಎಂ ಬಳಿ ಹಣ ವಾಪಸ್ ಪಡೆಯಲು ಕ್ಯೂ ಹಚ್ಚಿದ್ದರು.