ಕರ್ನಾಟಕ

karnataka

ETV Bharat / state

ಯಡಿಯೂರಪ್ಪನವರೇ ನಮ್ಮ ನಾಯಕರು, ಅದರಲ್ಲಿ ಎರಡು ಮಾತಿಲ್ಲ: ಉಮೇಶ್​​ ಕತ್ತಿ - Yeddiyurappa is always our leader

ಒಂದು ವಾರ ಅಥವಾ 10 ದಿನದಲ್ಲಿ ಸಚಿವ ಸಂಪುಟ ವಿಸ್ತರಣೆ ಆಗಲಿದೆ. ಯಡಿಯೂರಪ್ಪ ಯಾವತ್ತಿದ್ರೂ ನಮ್ಮ ನಾಯಕರು. ಅದರಲ್ಲಿ ಎರಡು ಮಾತಿಲ್ಲ ಎಂದು ಶಾಸಕ ಉಮೇಶ್​ ಕತ್ತಿ ಹೇಳಿದ್ದಾರೆ.

MLA Umesh katti
ಶಾಸಕ ಉಮೇಶ್​ ಕತ್ತಿ

By

Published : Jul 29, 2020, 5:22 PM IST

ಚಿಕ್ಕೋಡಿ:ಎಂತಹ ಪರಿಸ್ಥಿತಿ ಬಂದರೂ ನಿಭಾಯಿಸುವ ಶಕ್ತಿ ಯಡಿಯೂರಪ್ಪನವರಿಗೆ ಮಾತ್ರ ಇದೆ. ಯಡಿಯೂರಪ್ಪ ಯಾವತ್ತಿದ್ರೂ ನಮ್ಮ ನಾಯಕರು. ಅದರಲ್ಲಿ ಎರಡು ಮಾತಿಲ್ಲ ಎಂದು ಹೇಳುವ ಮೂಲಕ ಮತ್ತೆ ಸಿಎಂ ಯಡಿಯೂರಪ್ಪ ಅವರಿಗೆ ಶಾಸಕ ಉಮೇಶ್​ ಕತ್ತಿ ಬಲ ನೀಡಿದ್ದಾರೆ.

ಶಾಸಕ ಉಮೇಶ್​ ಕತ್ತಿ

ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದ ಈಶ್ವರಲಿಂಗ ಸಮುದಾಯ ಭವನದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಒಂದು ವಾರ ಅಥವಾ 10 ದಿನದಲ್ಲಿ ಸಚಿವ ಸಂಪುಟ ವಿಸ್ತರಣೆ ಆಗಲಿದೆ. ಸಿಎಂ ಯಡಿಯೂರಪ್ಪ ಅವರ ನೇತೃತ್ವದಲ್ಲಿ 34 ಜನರನ್ನು ಮಂತ್ರಿ ಮಾಡಬಹುದು. ಈಗಾಗಲೇ ರಾಜ್ಯದಲ್ಲಿ 28 ಜನ ಮಂತ್ರಿಗಳಿದ್ದು, ಇನ್ನೂ ಆರು ಜನರನ್ನು ಮಂತ್ರಿ ಮಾಡಬಹುದು. ಅದರಲ್ಲಿ ನಾನೂ ಮಂತ್ರಿಯಾಗಬಹುದು. ಉಳಿದ ಶಾಸಕರೂ ಮಂತ್ರಿ ಆಗಬಹುದು ಎಂದರು.

ಡಿಸಿಎಂ ಸವದಿ ಹಾಗೂ ಸಚಿವೆ ಶಶಿಕಲಾ ಜೊಲ್ಲೆ ತಮ್ಮ ಇಲಾಖೆಯ ಕೆಲಸಕ್ಕಾಗಿ ದೆಹಲಿಗೆ ಹೋಗಿದ್ದಾರೆ ಹೊರೆತು ಇದಕ್ಕೆ ರಾಜಕೀಯ ಬಣ್ಣ ಕೊಡುವ ಅವಶ್ಯಕತೆ ಇಲ್ಲ. ಸಚಿವರನ್ನ ನೇಮಕ ಮಾಡುವುದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿದ್ದು. ಇನ್ನೂ 20 ವರ್ಷ ನಾನು ರಾಜಕಾರಣದಲ್ಲಿ ಇರುತ್ತೇನೆ. 20 ವರ್ಷದ ಒಳಗೆ ನಾನು ಮುಖ್ಯಮಂತ್ರಿ ಆಗೇ ಆಗುತ್ತೇನೆ ಎಂದರು.

ABOUT THE AUTHOR

...view details