ಚಿಕ್ಕೋಡಿ:ಡಿಸೆಂಬರ್ 16ರಂದು ಯಮಕನಮರಡಿಯಲ್ಲಿ ವ್ಯಕ್ತಿಯ ಮೇಲೆ ಗುಂಡಿನ ದಾಳಿ ನಡೆಸಿದ ಆರೋಪಿಯ ಹೆಡೆಮುರಿಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಯಮಕನಮರಡಿ ಗ್ರಾಮದ ಜೈನ ಬಸದಿಯ ಬಳಿ ಡಿ.16ರಂದು ರಾತ್ರಿ ಭರಮಾ ದುಬದಾಳಿ ಎಂಬಾತ ಗೆಳೆಯರೊಂದಿಗೆ ಮಾತನಾಡುತ್ತಾ ಕುಳಿತಾಗ ಗುಂಡಿನ ದಾಳಿ ನಡೆಸಲಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು, ನಾದ ಗ್ರಾಮದ ಗಣಪತಿ ಕಾಲನಿಯ ವಿನಾಯಕ ಸೋಮಶೇಖರ ಹೊರಕೇರಿ (26)ಎಂಬಾತನನ್ನು ವಿಚಾರಣೆಗೆ ಒಳಪಡಿಸಿದ್ದರು, ಇಂದು ಬಂಧಿಸಿದ್ದಾರೆ.