ಕರ್ನಾಟಕ

karnataka

ETV Bharat / state

ಬೆಳಗಾವಿ: ಕಬ್ಬು ಕಟಾವು ವೇಳೆ ಹಾವು ಕಚ್ಚಿ ಕಾರ್ಮಿಕ ಸಾವು - ಈಟಿವಿ ಭಾರತ ಕನ್ನಡ

ಕಬ್ಬು ಕಟಾವು ಮಾಡುವ ವೇಳೆ ಕಾರ್ಮಿಕನಿಗೆ ಹಾವು ಕಡಿದು ಮೃತ ಪಟ್ಟಿರುವ ಘಟನೆ ಅಥಣಿಯಲ್ಲಿ ನಡೆದಿದೆ.

KN_ATH
ಕಬ್ಬು ಕಟಾವು ವೇಳೆ ಹಾವು ಕಚ್ಚಿ ಕಾರ್ಮಿಕ ಸಾವು

By

Published : Nov 30, 2022, 9:50 PM IST

ಅಥಣಿ(ಬೆಳಗಾವಿ): ಕಬ್ಬು ಕಟಾವು ವೇಳೆ ಹಾವು ಕಚ್ಚಿ ಕಾರ್ಮಿಕ ಸಾವಿಗೀಡಾಗಿರುವ ಘಟನೆ ತಾಲೂಕಿನ ಕಟಗೇರಿ ಗ್ರಾಮದಲ್ಲಿ ನಡೆದಿದೆ. ಅಥಣಿ ತಾಲೂಕಿನ ಹಣಮಾಪುರ ಗ್ರಾಮ ನಿವಾಸಿ ನಿತೇಶ್ ಬಾಬು ಪೂಜಾರಿ(30) ಮೃತ ದುರ್ದೈವಿ. ​ಎಂದಿನಂತೆ ಕಬ್ಬು ಕಟಾವು ಮಾಡಲು ತೆರಳಿದ್ದ ವೇಳೆ ನಿತೇಶ್​​ಗೆ ಹಾವು ಕಡಿದಿದ್ದು, ಕಡಿತದ ತೀವ್ರತೆಗೆ ಹಾವಿನ ಒಂದು ಹಲ್ಲು ಮುರಿದು ನಿತೇಶ್​ ಬಾಬು ಬಲಗೈಯಲ್ಲಿ ಸಿಲುಕಿ ಕೊಂಡಿದೆ.

ಮೃತ ವ್ಯಕ್ತಿ

ಇನ್ನು ತೀವ್ರ ಅಸ್ವಸ್ಥಗೊಂಡ ನಿತೇಶ್​ ಅವರನ್ನು ಕಟಗೇರಿ ಗ್ರಾಮದಿಂದ ಅಥಣಿ ಪಟ್ಟಣದ ಆಸ್ಪತ್ರೆಗೆ ಸಾಗಿಸುವ ವೇಳೆ, ಮಾರ್ಗ ಮಧ್ಯದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಹೊಲಕ್ಕೆ ಊಟ ತೆಗೆದುಕೊಂಡು ಹೋಗುತ್ತಿದ್ದಾಗ ಹಾವು ಕಚ್ಚಿ ಬಾಲಕಿ ಸಾವು

ABOUT THE AUTHOR

...view details