ಬೆಳಗಾವಿ: ಮಲಪ್ರಭಾ ನದಿಯ ಪ್ರವಾಹಕ್ಕೆ ಸೂರು ಕಳೆದುಕೊಂಡು ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಖಾನಾಪುರ ತಾಲೂಕಿನ ಹಿರೇಹಟ್ಟಿಹೊಳಿ ಗ್ರಾಮದ ಸಂತ್ರಸ್ತರು ಶಾಸಕಿ ಅಂಜಲಿ ನಿಂಬಾಳ್ಕರ್ ಅವರಿಗೆ ಕೈಮುಗಿದು ಕಣ್ಣೀರಿಟ್ಟರು.
ಪುನರ್ವಸತಿಗಾಗಿ ಶಾಸಕಿಗೆ ಕೈಮುಗಿದು ಬೇಡಿಕೊಂಡ ಮಹಿಳೆಯರು.. ಭಾವುಕರಾದ ಶಾಸಕಿ
ಮಲಪ್ರಭಾ ನದಿಯ ಪ್ರವಾಹಕ್ಕೆ ಸೂರು ಕಳೆದುಕೊಂಡು ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಖಾನಾಪುರ ತಾಲೂಕಿನ ಹಿರೇಹಟ್ಟಿಹೊಳಿ ಗ್ರಾಮದ ಸಂತ್ರಸ್ತರು ಶಾಸಕಿ ಅಂಜಲಿ ನಿಂಬಾಳ್ಕರ್ ಅವರಿಗೆ ಕೈಮುಗಿದು ಕಣ್ಣೀರಿಟ್ಟರು.
ಭಾವುಕರಾದ ಶಾಸಕಿ
ಮಾಜಿ ಸಚಿವ ಸತೀಶ ಜಾರಕಿಹೊಳಿ ಹಾಗೂ ಶಾಸಕಿ ಅಂಜಲಿ ನಿಂಬಾಳ್ಕರ್ ಇಂದು ಜಿಲ್ಲೆಯ ಖಾನಾಪುರ ತಾಲೂಕಿನ ಹಿರೇಹಟ್ಟಿಹೊಳಿ ಗ್ರಾಮದ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿದರು. ಸೂರು ಕಳೆದುಕೊಂಡ ಸಂತ್ರಸ್ತ ಮಹಿಳೆಯರು ಪುನರ್ವಸತಿ ಕಲ್ಪಿಸುವಂತೆ ಶಾಸಕಿಗೆ ಕೈಮುಗಿದು ಬೇಡಿಕೊಂಡರು. ಶಾಸಕಿ ಕೂಡ ಭಾವುಕರಾಗಿ ಸೂರು ಕಲ್ಪಿಸುವ ಭರವಸೆ ನೀಡಿದರು.
ಮಲಪ್ರಭಾ ನದಿ ನೀರಿನ ಪ್ರವಾಹಕ್ಕೆ ಗ್ರಾಮದ 60ಕ್ಕೂ ಅಧಿಕ ಮನೆಗಳು ಧರೆಗುರುಳಿವೆ. ಈ ಹಿನ್ನೆಲೆಯಲ್ಲಿ ಶಾಸಕರಾದ ಸತೀಶ ಜಾರಕಿಹೊಳಿ ಹಾಗೂ ಅಂಜಲಿ ನಿಂಬಾಳ್ಕರ್ ಅಗತ್ಯ ವಸ್ತುಗಳನ್ನು ಸಂತ್ರಸ್ತರಿಗೆ ವಿತರಿಸಿದರು.
Last Updated : Aug 16, 2019, 3:39 PM IST