ಕರ್ನಾಟಕ

karnataka

ETV Bharat / state

ಗಂಡನ ಮನೆಯವರ ಕಿರುಕುಳ ಆರೋಪ: ಕೃಷಿ ಹೊಂಡಕ್ಕೆ ಬಿದ್ದು ಮಹಿಳೆ ಆತ್ಮಹತ್ಯೆ - Chikkodi crime latest news

ಗಂಡನ ಮನೆಯವರ ಕಿರುಕುಳ ತಾಳಲಾರದೆ ಮಹಿಳೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕಣಗಲಾ ಗ್ರಾಮದಲ್ಲಿ ನಡೆದಿದೆ.

Suicidewomen-committed-suicide-at-chikkodi
Suicideಕಿರುಕುಳ ಆರೋಪ

By

Published : Aug 6, 2020, 10:25 AM IST

ಚಿಕ್ಕೋಡಿ:ಮಹಿಳೆವೋರ್ವಳು ಕೃಷಿ ಹೊಂಡಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಕ್ಕೇರಿ ತಾಲೂಕಿನ ಕಣಗಲಾ ಗ್ರಾಮದಲ್ಲಿ ನಡೆದಿದೆ.

ಸವಿತಾ ಜ್ಯೋತಿಬಾ ಕಲಾಗತೆ (21) ಆತ್ಮಹತ್ಯೆಗೆ ಶರಣಾದ ಗೃಹಿಣಿ. ಕಳೆದೆರಡು ತಿಂಗಳಿಂದ ನನ್ನ ಮಗಳಿಗೆ ಆಕೆಯ ಗಂಡನ ಮನೆಯವರು ಮಾನಸಿಕವಾಗಿ ಹಾಗೂ ದೈಹಿಕವಾಗಿ ಕಿರುಕಳ ನೀಡುತ್ತಿದ್ದರು. ಅವರು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದನೆ ನೀಡಿದ್ದರಿಂದ ಮನನೊಂದು‌ ಸವಿತಾ ಕೃಷಿಹೊಂಡದಲ್ಲಿ ಬಿದ್ದಿದ್ದಾಳೆ ಎಂದು ಮೃತಳ ತಂದೆ ಆರೋಪಿಸಿದ್ದಾರೆ.

ಈ ಸಂಬಂಧ ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details