ಬೆಳಗಾವಿ :ತನ್ನನ್ನು ಚುಡಾಯಿಸಿ ರಸ್ತೆಯಲ್ಲಿ ಹಿಂಬಾಲಿಸುತ್ತಿದ್ದ ಕಾಮುಕ ವ್ಯಕ್ತಿಗೆ ಮಹಿಳೆಯೊಬ್ಬರು ಚಪ್ಪಲಿ ಏಟು ನೀಡಿರುವ ಘಟನೆ ಇಲ್ಲಿನ ಎಸ್ಪಿ ಕಚೇರಿ ಮುಂದಿನ ರಸ್ತೆಯಲ್ಲಿ ಇಂದು ಸಂಜೆ ನಡೆದಿದೆ.
ನಗರದ ಗೋಪಾಲ ಗುರನ್ನವರ ಚಪ್ಪಲಿ ಸೇವೆ ಮಾಡಿಸಿಕೊಂಡ ವ್ಯಕ್ತಿ. ಮಹಿಳೆ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮುಗಿಸಿ ಮನೆಗೆ ವಾಪಸ್ ತೆರಳುತ್ತಿದ್ದ ವೇಳೆಯಲ್ಲಿ ಕೆಲ ತಿಂಗಳಿಂದಲೂ ಹಿಂಬಾಲಿಸುತ್ತಿದ್ದ. ಈ ವ್ಯಕ್ತಿ ಮಹಿಳೆಗೆ ಶಿಳ್ಳೆ ಹೊಡೆದು ಪ್ರತಿದಿನ ಚುಡಾಯಿಸುತ್ತಿದ್ದನಂತೆ. ಇದಲ್ಲದೇ ಕೆಲವು ಬಾರಿ ಮನೆಯವರೆಗೂ ತೆರಳಿದ್ದಾನೆ.