ಬೆಳಗಾವಿ :ಎರಡು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಡ ಮತ್ತು ಆತನ ಕುಟುಂಬಸ್ಥರ ಬಂಧನ ಆಗುವವರೆಗೂ ಶವಸಂಸ್ಕಾರ ಮಾಡೋದಿಲ್ಲ ಎಂದು ಮೃತ ಮಹಿಳೆಯ ಕುಟುಂಬಸ್ಥರು ಪಟ್ಟು ಹಿಡದಿದ್ದಾರೆ.
ನಗರದ ಬೀಮ್ಸ್ ಆಸ್ಪತ್ರೆಯ ಶವಾಗಾರದ ಎದುರಿಗೆ ಆಗಮಿಸಿದ ಮೃತ ಕೃಷಾ ಕುಟುಂಬಸ್ಥರಿಂದ ಮೃತಳ ಗಂಡ ಮತ್ತು ಆತನ ಕುಟುಂಬಸ್ಥರ ವಿರುದ್ಧ ಕೊಲೆ ಆರೋಪ ಮಾಡಿದ್ದು, ಗಂಡ ಮತ್ತು ಕುಟುಂಬಸ್ಥರ ಬಂಧನ ಆಗುವವರೆಗೂ ಶವ ಪಡೆಯೋದಿಲ್ಲ ಅಂತಾ ಪಟ್ಟುಹಿಡಿದ್ದಾರೆ.
ಹೀಗಾಗಿ, ಮೂರು ದಿನಗಳಿಂದ ಬಿಮ್ಸ್ ಶವಾಗಾರದಲ್ಲೇ ತಾಯಿ ಮತ್ತು ಕಂದಮ್ಮಗಳ ಶವ ಇದ್ದು, ನಿನ್ನೆ ದಿನ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಮೃತಳ ಕುಟುಂಬಸ್ಥರು ದೂರು ನೀಡಿದ್ದಾರೆ.
ಬೆಳಗಾವಿಯಲ್ಲಿ ಮಕ್ಕಳ ಜೊತೆಗೆ ಮಹಿಳೆ ಆತ್ಮಹತ್ಯೆ ಪ್ರಕರಣ.. ಆರೋಪಿಗಳ ಬಂಧನಕ್ಕೆ ಕುಟುಂಬಸ್ಥರ ಆಗ್ರಹ.. ಇದಲ್ಲದೇ ದೂರು ನೀಡದಂತೆ, ಶವಗಳನ್ನ ತೆಗೆದುಕೊಂಡು ಹೋಗುವಂತೆ ಕೆಲವರಿಂದ ನಮ್ಮ ಮೇಲೆ ಒತ್ತಡ ಹೇರಲಾಗುತ್ತಿದೆ. ಹೀಗಾಗಿ, ನ್ಯಾಯ ಕೊಡಿಸುವಂತೆ ಮೃತ ಕೃಷಾ ಕುಟುಂಬಸ್ಥರು ಇಂದು ಬಿಮ್ಸ್ ಆಸ್ಪತ್ರೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವೇಳೆ ಕೊಲೆ ಆರೋಪಿಗಳನ್ನ ಬಂಧಿಸಿ ನಮಗೆ ನ್ಯಾಯ ಕೊಡಿಸಿ ಅಂತಾ ಘೋಷಣೆ ಹಾಕಿದರು.
ಪ್ರಕರಣದ ಹಿನ್ನೆಲೆ :ಫೆ.11ರಂದು ಬೆಳಗಾವಿಯ ಹಿಂಡಲಗಾ ಗಣಪತಿ ದೇವಸ್ಥಾನ ಕೆರೆಯಲ್ಲಿ ಎರಡು ಮಕ್ಕಳೊಂದಿಗೆ ತಾಯಿಯ ಮೃತದೇಹ ಕೆರೆಯಲ್ಲಿ ಪತ್ತೆಯಾಗಿತ್ತು. ತಾಯಿ ಕೃಷಾ(36), ಮಕ್ಕಳಾದ ವಿರೇನ್(7) ಹಾಗೂ ಭಾವೀರ್(4) ಎಂಬುವರ ಶವ ಪತ್ತೆಯಾಗಿದ್ದವು.
ಈ ವೇಳೆ ಹೆಂಡತಿ ಮಕ್ಕಳ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಗಂಡ ಮತ್ತು ಕುಟುಂಬಸ್ಥರು ಎಸ್ಕೇಪ್ ಆಗಿದ್ದರು. ಮಕ್ಕಳ ಮೃತದೇಹ ನೋಡಲು ಪತಿ ಮತ್ತು ಆತನ ಕುಟುಂಬಸ್ಥರು ಆಗಮಿಸದೇ ಪರಾರಿಯಾಗಿದ್ದಾರೆ.
ಇದನ್ನೂ ಓದಿ : ಬೆಳಗಾವಿಯಲ್ಲಿ ಮಕ್ಕಳ ಜೊತೆಗೆ ಮಹಿಳೆ ಆತ್ಮಹತ್ಯೆ: ಶಾಲಾ ಸಮವಸ್ತ್ರದಲ್ಲೇ ಬಾಲಕನ ಶವಪತ್ತೆ