ಕರ್ನಾಟಕ

karnataka

ETV Bharat / state

ವಿಚ್ಛೇದನ ಅರ್ಜಿ ಹಿಂಪಡೆಯುತ್ತೇನೆ, ಪ್ರೇಮಕವಿಯ ಜತೆಗೆ ಬದುಕುತ್ತೇನೆ: ಕಲ್ಯಾಣ ಪತ್ನಿ ಹೇಳಿಕೆ - K. kalyana wife Ashwini statement

ಸದ್ಯದಲ್ಲೇ ಪತಿ ಕೆ.ಕಲ್ಯಾಣ ಅವರನ್ನು ಭೇಟಿ ಮಾಡುತ್ತೇ‌ನೆ. ನಮ್ಮಲ್ಲಿರುವ ಎಲ್ಲ ಸಮಸ್ಯೆಗಳನ್ನು ನಾವಿಬ್ಬರು ಕುಳಿತು ಬಗೆಹರಿಸಿಕೊಳ್ಳುತ್ತೇವೆ. ನಮ್ಮ ಕುಟುಂಬದಲ್ಲಿ ನಡೆದ ಕೆಟ್ಟ ಘಳಿಗೆಯೇ ಈ ಎಲ್ಲ ಅವಾಂತರಕ್ಕೆ ಕಾರಣವಾಯಿತು. ಕೌಟುಂಬಿಕ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ವಿಚ್ಛೇದನಾ ಅರ್ಜಿ ಹಿಂಪಡೆಯುತ್ತೇನೆ ಎಂದು ಪ್ರೇಮಕವಿ ಪತ್ನಿ ಅಶ್ವಿನಿ ಹೇಳಿದ್ದಾರೆ.

ಕಲ್ಯಾಣ ಪತ್ನಿ ಅಶ್ವಿನಿ
ಕಲ್ಯಾಣ ಪತ್ನಿ ಅಶ್ವಿನಿ

By

Published : Oct 12, 2020, 3:29 PM IST

Updated : Oct 12, 2020, 3:49 PM IST

ಬೆಳಗಾವಿ: ಕೌಟುಂಬಿಕ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ವಿಚ್ಛೇದನಾ ಅರ್ಜಿ ಹಿಂಪಡೆಯುತ್ತೇನೆ. ಮುಂದೆಯೂ ಕೆ.ಕಲ್ಯಾಣ ಜತೆಗೆ ಬದುಕುತ್ತೇನೆ ಎಂದು ಚಂದನವನದ ಪ್ರೇಮಕವಿ ಪತ್ನಿ ಅಶ್ವಿನಿ ಹೇಳಿದ್ದಾರೆ.

ಬೆಳಗಾವಿಯಲ್ಲಿ ಈಟಿವಿ ಭಾರತ ಜತೆಗೆ ಮಾತನಾಡಿದ ಅವರು, ಸದ್ಯದ್ರಲ್ಲೇ ಪತಿ ಕೆ.ಕಲ್ಯಾಣ ಅವರನ್ನು ಭೇಟಿ ಮಾಡುತ್ತೇ‌ನೆ. ನಮ್ಮಲ್ಲಿರುವ ಎಲ್ಲ ಸಮಸ್ಯೆಗಳನ್ನು ನಾವಿಬ್ಬರು ಕುಳಿತು ಬಗೆಹರಿಸಿಕೊಳ್ಳುತ್ತೇವೆ. ನಮ್ಮ ಕುಟುಂಬದಲ್ಲಿ ನಡೆದ ಕೆಟ್ಟ ಘಳಿಗೆಯೇ ಈ ಎಲ್ಲ ಅವಾಂತರಕ್ಕೆ ಕಾರಣವಾಯಿತು. ಈ ಎಲ್ಲದರ ಬಗ್ಗೆ ಪತಿ ಕೆ.ಕಲ್ಯಾಣ ಅವರನ್ನು ಸದ್ಯದ್ರಲ್ಲೇ ಭೇಟಿ ಮಾಡಿ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಮುಂದಿನ ಜೀವನ ಅವರೊಂದಿಗೆ ಕಳೆಯುತ್ತೇನೆ. ಈಗಾಗಲೇ ನ್ಯಾಯಾಲಯಕ್ಕೆ ಸಲ್ಲಿಸಲ್ಪಟ್ಟ ವಿಚ್ಛೇದನ ಅರ್ಜಿ ಹಿಂಪಡೆಯುತ್ತೇನೆ. ಈ ಕುರಿತು ಕೆಲವೊಂದಿಷ್ಟು ದಾಖಲೆ ಪತ್ರಗಳಿಗೆ ಈಗಾಗಲೇ ಸಹಿ ಮಾಡಿದ್ದೇನೆ ಎಂದರು.

ಪ್ರೇಮಕವಿಯ ಜತೆಗೆ ಬದುಕುತ್ತೇನೆ: ಕಲ್ಯಾಣ ಪತ್ನಿ ಹೇಳಿಕೆ

ನಮ್ಮ ಕುಟುಂಬ ಯಾವುದೋ ಒಂದು ಸುಳಿಯಲ್ಲಿ ಸಿಲುಕಿಕೊಂಡಿತ್ತು. ಇದೀಗ ಅದರಿಂದ ಸಂಪೂರ್ಣವಾಗಿ ಹೊರಬಂದಿದ್ದೇವೆ. ಇದಕ್ಕೆ ಕಾರಣರಾದ ಬೆಳಗಾವಿ ಪೊಲೀಸರಿಗೆ ಕೃತಜ್ಞತೆ ತಿಳಿಸುತ್ತೇನೆ. ಕಾನೂನು ಹಾಗೂ ಪೊಲೀಸರಿಂದ ನಮಗೆ ನಿಜವಾಗಿಯೂ ಸಹಾಯ ದೊರಕಿದೆ‌. ಮಾಧ್ಯಮಗಳ ಜತೆಗೆ ಸಮಾಧಾನದಿಂದ ಮಾತನಾಡಲು ಬೆಳಗಾವಿ ಪೊಲೀಸರೇ ಕಾರಣ ಎಂದು ಪೊಲೀಸರ ಕಾರ್ಯವನ್ನು ಸ್ಮರಿಸಿದರು. ಮನೆಗೆಲಸಕ್ಕೆ ಬರುವವರ ವೈಯಕ್ತಿಕ ಹಿನ್ನೆಲೆ ತಿಳಿದುಕೊಳ್ಳಿ. ಬಳಿಕವೇ ಕೆಲಸಕ್ಕೆ ಸೇರಿಸಿಕೊಳ್ಳಿ ಎಂದು ಜನರಲ್ಲಿ ಮನವಿ ಮಾಡಿದರು.

Last Updated : Oct 12, 2020, 3:49 PM IST

ABOUT THE AUTHOR

...view details