ಬೆಳಗಾವಿ :ಲಾಕ್ಡೌನ್ ಹಿನ್ನೆಲೆ ಜಿಲ್ಲೆಯಲ್ಲಿ ವೈನ್‌ಶಾಪ್ ಬಂದ್ ಆಗಿವೆ. ಪರಿಣಾಮ ಜಿಲ್ಲೆಯ ಮದ್ಯವ್ಯಸನಿಯೊಬ್ಬ ಕಂಠಪೂರ್ತಿ ಸಾರಾಯಿ ಕುಡಿದು ಮೃತಪಟ್ಟಿದ್ದಾನೆ. ಅಶೋಕ್ ನಗರದ ನಿವಾಸಿ ಪ್ರಕಾಶ್ ಮಸರಗುಪ್ಪಿ(33) ಮೃತ ವ್ಯಕ್ತಿ. ವೃತ್ತಿಯಲ್ಲಿ ಕಾರು ಚಾಲಕನಾಗಿದ್ದ ಈತ ಮದ್ಯವ್ಯಸನಿಯಾಗಿದ್ದ. ಮದ್ಯದ ಅಂಗಡಿ ಬಂದ್ ಹಿನ್ನೆಲೆಯಲ್ಲಿ ವಿಪರೀತ ಸಾರಾಯಿ ಕುಡಿದು ಮೃತಪಟ್ಟಿದ್ದಾನೆ.
ವೈನ್ ಶಾಪ್ ಬಂದ್ ಇದ್ರೂ ಕಂಠಪೂರ್ತಿ ಸಾರಾಯಿ ಕುಡಿದು ಸಾವನ್ನಪ್ಪಿದ ಕಾರು ಚಾಲಕ.. - ಕಂಠಪೂರ್ತಿ ಸಾರಾಯಿ ಕುಡಿದು ಸಾವನ್ನಪ್ಪಿದ ಕಾರು ಚಾಲಕ
ವೃತ್ತಿಯಲ್ಲಿ ಕಾರು ಚಾಲಕನಾಗಿದ್ದ ಈತ ಮದ್ಯವ್ಯಸನಿಯಾಗಿದ್ದ. ಮದ್ಯದ ಅಂಗಡಿ ಬಂದ್ ಹಿನ್ನೆಲೆಯಲ್ಲಿ ವಿಪರೀತ ಸಾರಾಯಿ ಕುಡಿದು ಮೃತಪಟ್ಟಿದ್ದಾನೆ.

ಕಂಠಪೂರ್ತಿ ಸಾರಾಯಿ ಕುಡಿದು ಸಾವನ್ನಪ್ಪಿದ ಕಾರು ಚಾಲಕ
ಕುಡಿದ ಮತ್ತಿನಲ್ಲಿ ನಗರದ ಧರ್ಮನಾಥ್ ವೃತ್ತದ ಬಳಿಯ ಚರಂಡಿಯಲ್ಲಿ ಬಿದ್ದಿದ್ದ ಆತನಿಗೆ ಸರಿಯಾದ ಸಮಯಕ್ಕೆ ಆಹಾರ ಸಿಗದೇ ಮೃತಪಟ್ಟಿದ್ದಾನೆ ಎಂದು ಸ್ಥಳೀಯರು ಆರೋಪಿದ್ದಾರೆ. ಸ್ಥಳಕ್ಕೆ ಮಾಳಮಾರುತಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.