ಕರ್ನಾಟಕ

karnataka

ETV Bharat / state

ರೆಬೆಲ್‌ ಸ್ಟಾರ್‌ ರಮೇಶ್‌ ಹೇಳಿದಂತೆ ಕೇಳುವ ಅನಿವಾರ್ಯತೆ? ಅಥಣಿ ಶಾಸಕ ಕುಮಟಳ್ಳಿ ರಾಜೀನಾಮೆ ಕೊಡ್ತಾರಾ? - Kannada news

ಮಹೇಶ ಕುಮಟಳ್ಳಿ ರೆಬೆಲ್ ಜಾರಕಿಹೊಳಿಯವರಿಗೆ ಬೆಂಬಲ ಘೋಷಿಸುವುದು ಅನಿವಾರ್ಯವಾಗಿದೆ.  ಮಹೇಶ್, ರಮೇಶ್ ಜಾರಕಿಹೊಳಿಯವರು ಹೇಳಿದಂತೆ ಕೇಳುವುದು ಅನಿವಾರ್ಯ ಅಂತಾ ಅಥಣಿ ಮತದಾರರು ಮಾತನಾಡಿಕೊಳ್ಳುತ್ತಿದ್ದಾರೆ.

ಮಹೇಶ ಕುಮಠಳ್ಳಿ, ರೆಬಲ್ ಜಾರಕಿಹೊಳಿ

By

Published : Jul 2, 2019, 12:26 PM IST

ಚಿಕ್ಕೋಡಿ : ಅಥಣಿ ಮತಕ್ಷೇತ್ರದ ಕಾಂಗ್ರೆಸ್ ಶಾಸಕ ಮಹೇಶ ಕುಮಟಳ್ಳಿ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಾರಾ ಎಂಬ ಪ್ರಶ್ನೆ ಈಗ ಕ್ಷೇತ್ರದ ತುಂಬಾ ಚರ್ಚೆಯಾಗುತ್ತಿದೆ.

ಗೋಕಾಕ್ ಕ್ಷೇತ್ರದ ಕಾಂಗ್ರೆಸ್ ಶಾಸಕ ರಮೇಶ ಜಾರಕಿಹೊಳಿ ಆಪ್ತರಲ್ಲಿ ಗುರುತಿಸಿಕೊಂಡಿರುವ ಅಥಣಿ ಮತಕ್ಷೇತ್ರದ ಶಾಸಕ ಮಹೇಶ ಕುಮಟಳ್ಳಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಾರೆ ಹಾಗೂ ರಮೇಶ ಜಾರಕಿಹೊಳಿ ಅವರು ಹೇಳಿದ ಹಾಗೆ ಕೇಳುತ್ತಾರೆ ಎಂದು ಚರ್ಚೆ ಪ್ರಾರಂಭವಾಗಿದ್ದು, ಅದು ನಿಜವಾದರೆ ಅದಕ್ಕೆ ಕೆಲವು ಕಾರಣಗಳೂ ಇವೆ.

ಅಥಣಿ ವಿಧಾನಸಭಾ ಮತಕ್ಷೇತ್ರ ಬಿಜೆಪಿ ಭದ್ರಕೋಟೆ. ಲಕ್ಷ್ಮಣ ಸವದಿ ಶಾಸಕರಾಗಿ, ಸಚಿವರಾಗಿ ರಾಜಕೀಯ ಮಾಡಿದವರು. ಅವರನ್ನು ಸೋಲಿಸುವುದರ ಮೂಲಕ ಪ್ರಥಮ ಬಾರಿ ಕಾಂಗ್ರೆಸ್ ಪಕ್ಷದಿಂದ ಅಥಣಿ ಮತಕ್ಷೇತ್ರದ ಶಾಸಕರಾಗಿ ಮಹೇಶ ಕುಮಟಳ್ಳಿ ಆಯ್ಕೆಯಾಗಲು ಮೂಲ ಕಾರಣ ರಮೇಶ ಜಾರಕಿಹೊಳಿ.ಅದಕ್ಕಾಗಿ ಸದ್ಯ ಮಹೇಶ್ ಕುಮಟಳ್ಳಿ ರೆಬೆಲ್ ಜಾರಕಿಹೊಳಿಯವರಿಗೆ ಬೆಂಬಲ ಘೋಷಿಸುವುದು ಅನಿವಾರ್ಯವಾಗಿದೆ. ಮಹೇಶ್, ರಮೇಶ್ ಜಾರಕಿಹೊಳಿಯವರು ಹೇಳಿದಂತೆ ಕೇಳುವುದು ಅನಿವಾರ್ಯ ಎಂದು ಅಥಣಿಯ ಮತದಾರರು ಮಾತನಾಡಿಕೊಳ್ಳುತ್ತಿದ್ದಾರೆ.

ABOUT THE AUTHOR

...view details