ಕರ್ನಾಟಕ

karnataka

ETV Bharat / state

ಬೆಳಗಾವಿ: ಗಂಡನ ಕೊಲೆಗೈದ ಪತ್ನಿ, ಪ್ರಿಯಕರನ ಬಂಧನ - ಈಟಿವಿ ಭಾರತ ಕನ್ನಡ

ಪ್ರಿಯಕರನ ಜೊತೆ ಸೇರಿದ ಮಹಿಳೆಯೊಬ್ಬಳು ತನ್ನ ಗಂಡನ ಕೊಲೆಗೈದ ಪ್ರಕರಣವನ್ನು ಬೆಳಗಾವಿ ಪೊಲೀಸರು 24 ಗಂಟೆಯೊಳಗೆ ಬಗೆಹರಿಸಿದ್ದಾರೆ.

KN_BGM
ಪ್ರಕರಣದ ಆರೋಪಿಗಳು

By

Published : Sep 21, 2022, 11:49 AM IST

ಬೆಳಗಾವಿ: ಪ್ರಿಯಕರನ ಜೊತೆ ಸೇರಿಕೊಂಡ ಪತ್ನಿ ತನ್ನ ಗಂಡನ ಕೊಲೆ ಮಾಡಿರುವ ಘಟನೆ ರಾಮದುರ್ಗ ತಾಲೂಕಿನ ಕಟಕೋಳ ಗ್ರಾಮದಲ್ಲಿ ನಡೆದಿದೆ.

ಲಕ್ಷ್ಮೀ ಮತ್ತು ರಮೇಶ ಬಡಿಗೇರ್​ ಬಂಧಿತರು. ಲಕ್ಷ್ಮೀ ತನ್ನ ಪ್ರಿಯಕರನ ಜೊತೆ ಸೇರಿ ಪತಿ ಪಾಂಡಪ್ಪ(35)ನನ್ನು ಕಬ್ಬಿಣದ ಸಲಾಕೆಯಿಂದ ಹೊಡೆದು ಹತ್ಯೆ ಮಾಡಿದ್ದಾಳೆ. ಬಳಿಕ ಆತ ಅಪಘಾತದಲ್ಲಿ ಮೃತಪಟ್ಟಿದ್ದಾನೆ ಎಂದು ಬಿಂಬಿಸಲು ಶವವನ್ನು ಬೈಕ್‌ನಲ್ಲಿ ಹೊತ್ತೊಯ್ದು ಹೊಸೂರು ಕಿರುಸೇತುವೆ ಬಳಿ ಎಸೆದು ಬಂದಿದ್ದರು. ಈ ಕುರಿತು ಕಟಕೋಳ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಕುರಿತು ತನಿಖೆ ಆರಂಭಿಸಿದ ಪೊಲೀಸರಿಗೆ ರಮೇಶ್ ಬಡಿಗೇರ ಜೊತೆಗೆ ಲಕ್ಷ್ಮಿ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ವಿಚಾರ ಗೊತ್ತಾಗಿದೆ. ನಂತರ ಪೊಲೀಸರು ರಮೇಶ್​ ಮತ್ತು ಲಕ್ಷ್ಮೀಯನ್ನು ಬಂಧಿಸಿದ್ದು, ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಘಟನೆ ನಡೆದು 24 ಗಂಟೆಯೊಳಗೆ ಪೊಲೀಸರು ಪ್ರಕರಣ ಬಗೆಹರಿಸಿದ್ದಾರೆ.

ಇದನ್ನೂ ಓದಿ:ಮದ್ವೆಯಾಗಿ ಎರಡೇ ವರ್ಷ, ಬಂಗಾರ-ದುಡ್ಡಿನ ದಾಹಕ್ಕೆ ಪತ್ನಿಯ ಚುಚ್ಚಿ ಕೊಂದ ಪತಿ

ABOUT THE AUTHOR

...view details