ಕರ್ನಾಟಕ

karnataka

ETV Bharat / state

ಆರ್​​ಟಿ-ಪಿಸಿಆರ್ ಪರೀಕ್ಷೆ ನಂಬಿಕೆಗೆ ಅರ್ಹವೇ? ತಜ್ಞರ ಅಭಿಪ್ರಾಯ ಇಲ್ಲಿದೆ.. - belgavi hyc

ಕೊರೊನಾ ಪತ್ತೆಗಾಗಿ ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಆರ್​​ಟಿ-ಪಿಸಿಆರ್ ಪರೀಕ್ಷೆ ನಡೆಸಲಾಗುತ್ತದೆ. ಆದ್ರೆ ಅದನ್ನು ಸಂಪೂರ್ಣ ಒಪ್ಪಲಾಗುವುದಿಲ್ಲ ಎಂಬುದು ತಜ್ಞರ ಅಭಿಪ್ರಾಯ.

RTPCR test
ಆರ್​​ಟಿಪಿಸಿಆರ್ ಪರೀಕ್ಷೆ

By

Published : May 19, 2021, 9:31 AM IST

ಬೆಳಗಾವಿ:ಜಗತ್ತನ್ನೇ ಆವರಿಸಿರುವ ಮಹಾಮಾರಿ ಕೊರೊನಾ ಸೋಂಕು ಪತ್ತೆಗಾಗಿ ನಡೆಸುವ ಆರ್​ಟಿ-ಪಿಸಿಆರ್ ಪರೀಕ್ಷೆಯ ವರದಿ ಬಗ್ಗೆಯೇ ಇದೀಗ ತಜ್ಞರು ಸಂಶಯ ವ್ಯಕ್ತಪಡಿಸಿದ್ದಾರೆ. ಈ ಪರೀಕ್ಷೆಯ ವರದಿಯ ಫಲಿತಾಂಶ ನೂರಕ್ಕೆ ನೂರರಷ್ಟು ನೈಜತೆಯಿಂದ ಕೂಡಿಲ್ಲ ಎಂಬ ಸಂಗತಿ ಬಹಿರಂಗಗೊಂಡಿದ್ದು, ಜನರು ಗೊಂದಲದಲ್ಲಿದ್ದಾರೆ.

ಸೋಂಕಿತರ ಪ್ರಾಥಮಿಕ ಸಂಪರ್ಕ ಹೊಂದಿದವರು, ಕೋವಿಡ್ ಲಕ್ಷಣಗಳಾದ ಜ್ವರ, ಕೆಮ್ಮು, ನೆಗಡಿ ಹಾಗೂ ಸುಸ್ತು ಆದವರಿಗೆ ಆರ್​ಟಿ-ಪಿಸಿಆರ್ ಟೆಸ್ಟ್ ಮಾಡಲಾಗುತ್ತಿದೆ. ಆದ್ರೆ ಈ ಟೆಸ್ಟ್ ಅನ್ನು ಸಂಪೂರ್ಣ ಒಪ್ಪಲಾಗುವುದಿಲ್ಲ ಅಂತಾರೆ ತಜ್ಞರು.

ತಜ್ಞರ ಅಭಿಪ್ರಾಯ

ಗಂಟಲು, ಮೂಗಿನ ದ್ರವ ಸಂಗ್ರಹ:

ಆರ್​ಟಿ-ಪಿಸಿಆರ್ ಪರೀಕ್ಷೆಗೆ ಒಳಗಾಗುವ ಜನರ ಗಂಟಲು ಹಾಗೂ ಮೂಗಿನ ದ್ರವ ಸಂಗ್ರಹಿಸಲಾಗುತ್ತದೆ. ಹೀಗೆ ಸಂಗ್ರಹಿಸಿದ ದ್ರವವನ್ನು ಆರ್​​ಟಿಪಿ-ಸಿಆರ್ ಕಿಟ್‍ನ ಕೋಲ್ಡ್ ಚೈನ್ ಒಳಗೆ ಸಂಗ್ರಹಿಸಿ ಪ್ರಯೋಗಾಲಯಕ್ಕೆ ರವಾನಿಸಲಾಗುತ್ತದೆ. ಆದ್ರೆ ಸೋಂಕು ಲಕ್ಷಣಗಳಿದ್ದರೂ ಕೂಡ ಸೋಂಕು ತಗುಲಿದ ಮೊದಲ ದಿನಗಳಲ್ಲಿ ವರದಿ ನೆಗೆಟಿವ್​ ಬರುವ ಸಾಧ್ಯತೆಗಳಿರುತ್ತದೆ.

ಆರ್​​​ಟಿ-ಪಿಸಿಆರ್ ಕಿಟ್ ಗುಣಮಟ್ಟ:

ಪರೀಕ್ಷೆಯ ವರದಿ ನೈಜವಾಗಿ ಬರಬೇಕಾದರೆ ಆರ್​​​ಟಿ-ಪಿಸಿಆರ್ ಕಿಟ್ ಕೂಡ ಗುಣಮಟ್ಟದಿಂದ ಕೂಡಿರಬೇಕು. ಆ ಬಳಿಕ ವರದಿ ಸಿದ್ಧಪಡಿಸಿ, ಫಲಿತಾಂಶ ಪ್ರಕಟಿಸಲಾಗುತ್ತದೆ. ಕಿಟ್​ನಲ್ಲಿ ಸಮಸ್ಯೆ ಇದ್ದರೆ ವರದಿಯಲ್ಲಿ ಹೆಚ್ಚುಕಡಿಮೆ ಆಗುವ ಸಾಧ್ಯತೆ ಇರುತ್ತದೆ. ಪಾಸಿಟಿವ್ ಇದ್ದರೂ ಕೂಡ ಕೆಲವೊಮ್ಮೆ ಇದರ ವರದಿ ನೆಗೆಟಿವ್ ಬರುವುದನ್ನು ಅಲ್ಲಗಳೆಯುವಂತಿಲ್ಲ. ಹೀಗಾಗಿ ಆರ್​​​​ಟಿ-ಪಿಸಿಆರ್ ಒಂದನ್ನೇ ಅವಲಂಬಿಸಬಾರದು ಎಂಬುದು ತಜ್ಞರ ಸಲಹೆ.

ನೆಗೆಟಿವ್ ಬಂದರೂ ಐಸೋಲೇಷನ್ ಇರಬೇಕು:

ಕೋವಿಡ್ ಲಕ್ಷಣಗಳಿದ್ದರೂ ಅಥವಾ ಸೋಂಕಿತರ ಜೊತೆಗೆ ಪ್ರಾಥಮಿಕ ಸಂಪರ್ಕ ಹೊಂದಿದವರ ಆರ್​​ಟಿ-ಪಿಸಿಆರ್ ಪರೀಕ್ಷಾ ವರದಿ ನೆಗೆಟಿವ್ ಬರುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ ಕೋವಿಡ್ ಲಕ್ಷಣಗಳಾದ ಕೆಮ್ಮು, ಜ್ವರ, ನೆಗಡಿ ಹಾಗೂ ಸುಸ್ತಾಗುತ್ತಿದ್ದರೆ ವರದಿ ನೆಗೆಟಿವ್ ಬಂದರೂ ಹೋಮ್ ಐಸೋಲೇಶನ್ ಇರುವುದೇ ಉತ್ತಮ.

ಇದನ್ನೂ ಓದಿ:ಕೋವಿಡ್​ ಟೆಸ್ಟ್: ದ.ಕ ಜಿಲ್ಲೆಯಲ್ಲಿ ಪ್ರಾಥಮಿಕ ಸಂಪರ್ಕ, ಸೋಂಕು ಲಕ್ಷಣ ಇರುವವರಿಗೆ ಮೊದಲ ಆದ್ಯತೆ

ಈ ವೇಳೆ ತಜ್ಞರ ಸಲಹೆ ಮೇರೆಗೆ ಔಷಧೋಪಚಾರ ಆರಂಭಿಸುವುದು ಕೂಡ ಒಳ್ಳೆಯದು. ಒಂದು ವಾರದ ಬಳಿಕ ಮತ್ತೆ ಪರೀಕ್ಷೆಗೆ ಒಳಪಟ್ಟು ವರದಿ ಆಧಾರದ ಮೇಲೆ ಸೋಂಕು ಇದೆಯೋ? ಇಲ್ಲವೋ? ಎಂಬುವುದನ್ನು ದೃಢಪಡಿಸಿಕೊಳ್ಳಬೇಕು. ಮತ್ತೆ ವರದಿ ನೆಗೆಟಿವ್ ಬಂದ್ರೆ ಮಾತ್ರ ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸಿ. ಅಗತ್ಯ ಇದ್ದರೆ ಮನೆಯಿಂದ ಹೊರ ಬರಬೇಕು. ಅನಗತ್ಯವಾಗಿ ಮನೆಯಿಂದ ಹೊರಬರದೇ ಮನೆಯಲ್ಲೇ ಇರಬೇಕು. ಆಗ ಮಾತ್ರ ಕೋವಿಡ್‍ನಿಂದ ಪಾರಾಗಲು ಸಾಧ್ಯ ಅನ್ನೋದು ಬೀಮ್ಸ್ ಮೈಕ್ರೋಬಯಾಲಜಿ ವಿಭಾಗದ ಮುಖ್ಯಸ್ಥ ಡಾ.ಮಹಾಂತೇಶ್ ಪಾರಂಡೆ ಅವರ ಸಲಹೆ.

ABOUT THE AUTHOR

...view details