ಕರ್ನಾಟಕ

karnataka

ETV Bharat / state

ಮಹೇಶ್​​​ ಕುಮಟಳ್ಳಿಗೆ ಯಾವುದೇ ರೀತಿಯ ಅನ್ಯಾಯವಾಗಲು ನಾವು ಬಿಡಲ್ಲ: ರಮೇಶ್​​​​ ಜಾರಕಿಹೊಳಿ - Mahesh Kumatalli do any kind of injustice

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ದರೂರ ಗ್ರಾಮದಲ್ಲಿ ಅನರ್ಹ ಶಾಸಕ ರಮೇಶ್​ ಜಾರಕಿಹೊಳಿ ಬೆಂಬಲಿಗರ ಸಭೆ ನಡೆಸಿದ್ರು. ಈ ಸಭೆಯಲ್ಲಿ ಮಹೇಶ್ ಕುಮಟಳ್ಳಿಗೆ ಯಾವುದೇ ರೀತಿಯ ಅನ್ಯಾಯವಾಗಲು ನಾವು ಬಿಡುವುದಿಲ್ಲ ಎಂದು ಹೇಳಿದ್ರು.

ಅನರ್ಹ ಶಾಸಕ ರಮೇಶ್​ ಜಾರಕಿಹೊಳಿ

By

Published : Sep 29, 2019, 7:31 PM IST

ಬೆಳಗಾವಿ:ನಾವೆಲ್ಲರೂ ಸೇರಿ ಈ ಬಾರಿ ಮಹೇಶ್​ ಕುಮಟಳ್ಳಿ ಅವರನ್ನು 25,000 ಸಾವಿರ ಮತಗಳಿಂದ ಉಪ ಚುನಾವಣೆಯಲ್ಲಿ ಗೆಲ್ಲಿಸಬೇಕು. ಬೃಹತ್​ ಗೆಲುವು ಪಡೆದ ನಂತರ ಅವರು ದೊಡ್ಡ ಹುದ್ದೆಗೆ ಹೋಗ್ತಾರೆ ಎಂದು ದರೂರ ಗ್ರಾಮದಲ್ಲಿ ನಡೆದ ಬೆಂಬಲಿಗರ ಸಭೆಯಲ್ಲಿ ರಮೇಶ್​ ಜಾರಕಿಹೊಳಿ ಹೇಳಿದರು.

ಮಹೇಶ್ ಕುಮಟಳ್ಳಿಗೆ ಯಾವುದೇ ರೀತಿಯ ಅನ್ಯಾಯವಾಗಲು ನಾವು ಬಿಡುವುದಿಲ್ಲ. ಮೊನ್ನೆ ಅವರ ವಿಷಯದಲ್ಲಿ ಗಲಾಟೆ ನಡೆದಿತ್ತು. ಅನರ್ಹ ಶಾಸಕರು ಮಹೇಶ್ ಕುಮಟಳ್ಳಿ ಅವರನ್ನು ತುಂಬಾ ಕಾಳಜಿಯಿಂದ ಕಾಣುತ್ತಾರೆ ಎಂಬ ಮಾಹಿತಿ ಇದೆ ಎಂದು ರಮೇಶ್​​ ಜಾರಕಿಹೊಳಿ ಸಭೆಯಲ್ಲಿ ಹೇಳಿದ್ರು.

ಅನರ್ಹ ಶಾಸಕ ರಮೇಶ್​ ಜಾರಕಿಹೊಳಿ

ಅಥಣಿ ಜನತೆ ಮಹೇಶ್ ಕುಮಟಳ್ಳಿ ಅವರನ್ನು 25000 ಸಾವಿರ ಮತಗಳಿಂದ ಉಪ ಚುನಾವಣೆಯಲ್ಲಿ ಗೆಲ್ಲಿಸಬೇಕು. ಅವರಿಗೆ ಬೃಹತ್​ ಗೆಲುವು ಸಿಕ್ಕಂತಾದ್ರೆ ದೊಡ್ಡ ಹುದ್ದೆಯಲ್ಲಿ ನಾವೆಲ್ಲರೂ ನೋಡ್ತೀವಿ ಎಂದು ರಮೇಶ್​ ಜಾರಕಿಹೊಳಿ ಹೇಳಿದರು.

ಒಟ್ಟಾರೆಯಾಗಿ ಅಥಣಿ ಪ್ರದೇಶ ನೀರಾವರಿ ವಂಚಿತ ಕ್ಷೇತ್ರ ಎಂಬುದು ರಮೇಶ್ ಜಾರಕಿಹೊಳಿ ಪದೇ ಪದೇ ಹೇಳುತ್ತಾರೆ. ಒಂದು ವೇಳೆ ಉಪ ಚುನಾವಣೆಯಲ್ಲಿ ಮಹೇಶ್ ಕುಮಟಳ್ಳಿಗೆ ದೊಡ್ಡ ಗೆಲುವು ಸಿಕ್ಕಂತಾದ್ರೆ ನೀರಾವರಿ ಸಚಿವ ಸ್ಥಾನ ಸಿಗಬಹುದು ಎಂಬ ಲೆಕ್ಕಾಚಾರ ಅವರದ್ದಾಗಿದೆ ಎನ್ನಲಾಗ್ತಿದೆ.

ABOUT THE AUTHOR

...view details